ಮಕ್ಕಳ ಕಲಾ ಲೋಕದಿಂದ ವಿದ್ಯಾರ್ಥಿಗಳಿಗೆ ಸ್ವರಚನಾ ಪ್ರೇರಣಾ ಕಮ್ಮಟ

Share with

ಬಂಟ್ವಾಳ :ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಇದರ ವತಿಯಿಂದ ಪಾಣೆಂಗಳೂರು ಶ್ರೀ ವೀರವೀಠಲ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಬಂಟ್ವಾಳ ನಗರ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳ ಸಾಹಿತ್ಯಾಸಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಒಂದು ದಿನದ ಸಾಹಿತ್ಯ ಸ್ವರಚನೆ ಪ್ರೇರಣಾ ಕಮ್ಮಟ ನಡೆಯಿತು.

ಪಾಣೆಮಂಗಳೂರು ಅನುದಾನಿತ  ಹಿ. ಪ್ರಾ. ಶಾಲಾ ಸಂಚಾಲಕರಾದ  ಯೋಗೀಶ್ ಪೈ  ಕಮ್ಮಟವನ್ನು ಉದ್ಘಾಟಿಸಿ ಭಾಷೆಯ ಉಳಿವು ಸಾಹಿತ್ಯದ ಮೂಲಕವೇ ನಡೆಯುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯ ಶಿಕ್ಷಕ ವಿನೋದ್ ಎನ್  ಮಕ್ಕಳಲ್ಲಿ ಸ್ವಂತಿಕೆಯಿದ್ದಾಗ ಅವರ ಭವಿಷ್ಯವು ಉಜ್ವಲಗೊಳ್ಳುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿ ವಿಂಧ್ಯಾ ಎಸ್ ರೈ ಕಡೇಶಿವಾಲಯ ಮತ್ತು ಮಕ್ಕಳ ಕಲಾಲೋಕದ ಗೌರವ ಸಲಹೆಗಾರ ಭಾಸ್ಕರ ಅಡ್ವಳ ಸಹಕರಿಸಿದರು

ಬಂಟ್ವಾಳ ನಗರ  ಸಿ.ಆರ್.ಪಿ ಸತೀಶ್ ರಾವ್, ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲಾ ಶಿಕ್ಷಕಿ ತೇಜಸ್ವಿನಿ, ಬಂಟ್ವಾಳ ಎಸ್.ವಿ.ಎಸ್. ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಶಿಕ್ಷಕ ದಾಮೋದರ ಪಡಿಯಾರ್ ಉಪಸ್ಥಿತರಿದ್ದರು.

ಕಮ್ಮಟದಲ್ಲಿ ಬಂಟ್ವಾಳ ನಗರ  ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳ 31 ವಿದ್ಯಾರ್ಥಿಗಳು ಭಾಗವಹಿಸಿದರು.
ಅಪರಾಹ್ನ ಜರಗಿದ ಸಮಾರೋಪ ಸಮಾರಂಭದಲ್ಲಿ ಮಕ್ಕಳ ಸ್ವರಚನೆಗಳ ಹಸ್ತ ಪತ್ರಿಕೆಯನ್ನು ಪಾಣೆಮಂಗಳೂರು ಎಸ್.ವಿ.ಎಸ್ ಅ.ಹಿ.ಪ್ರಾ ಶಾಲಾ ಮು.ಶಿ. ವಿನೋದ್ ಎನ್. ಅನಾವರಣಗೊಳಿಸಿದರು

ಮಕ್ಕಳ ಕಲಾಲೋಕದ ಅಧ್ಯಕ್ಷರಾದ ರಮೇಶ ಎಂ ಬಾಯಾರು ಪ್ರಸ್ತಾವನೆ ಮಾಡಿ, ಕಾರ್ಯದರ್ಶಿ ಪುಷ್ಪಾ ಎಚ್ ಸ್ವಾಗತಿಸಿ . ಸಹ ಶಿಕ್ಷಕ ಕೇಶವ ಬಂಗೇರ ವಂದಿಸಿ,ಸಹ ಶಿಕ್ಷಕ ರಾಜೇಂದ್ರ ಗೌಡ ಕಾರ್ಯಕ್ರಮ  ನಿರೂಪಿಸಿದರು.


Share with

Leave a Reply

Your email address will not be published. Required fields are marked *