ಕೋರ್ಟ್ ಮೆಟ್ಟಿಲೇರಿದ ಯಶ್, ರಾಧಿಕಾ ಪಂಡಿತ್! ನಿನ್ನೇವರೆಗೂ ಎಲ್ಲಾ ಚೆನ್ನಾಗಿತ್ತಲ್ಲ..!

Share with

ಸ್ಯಾಂಡಲ್‌ವುಡ್‌ನ ಮೋಸ್ಟ್ ಬ್ಯೂಟಿಫುಲ್ ಕಪಲ್ ಯಶ್ ಮತ್ತು ರಾಧಿಕಾ ಪಂಡಿತ್ ಕೋರ್ಟ್ ಮೆಟ್ಟಿಲೇರಿದ್ದಾರೆ. ನಿನ್ನೆವರೆಗೂ ಎಲ್ಲಾ ಚೆನ್ನಾಗೇ ಇತ್ತಲ್ಲಾ.. ಇವತ್ತೇನಾಯ್ತು ಅನ್ನೋರಿಗೆ ಇಲ್ಲಿದೆ ಉತ್ತರ.
ಬೆಸ್ಟ್ ಜೋಡಿ ಅಂದರೆ ಯಶ್ ಮತ್ತು ರಾಧಿಕಾ ಪಂಡಿತ್ ಅಂತ ಬಹಳಷ್ಟು ಮದುವೆ ಆಗದ ಸೆಲೆಬ್ರಿಟಿಗಳು ಹೇಳ್ತಿರುತ್ತಾರೆ, ಜೊತೆಗೆ ನಾವೂ ಮದುವೆ ಆದ್ಮೇಲೆ ಹಾಗೇ ಇದ್ರೆ ಚೆನ್ನಾಗಿರುತ್ತೆ ಅನ್ನೋ ಲೈನನ್ನೂ ಸೇರಿಸಿರ್ತಾರೆ. ಸ್ಯಾಂಡಲ್‌ವುಡ್ ಮಂದಿಗೆ ಈ ಜೋಡಿ ಕಂಡರೆ ಅಷ್ಟಿಷ್ಟ. ಸದ್ಯ ಇವರ ಪಾಪ್ಯುಲಾರಿಟಿ ಇಂಡಿಯಾವನ್ನೂ ಮೀರಿ ಫಾರಿನ್‌ವರೆಗೂ ಹಬ್ಬಿದೆ. ಅವಕಾಶ ಸಿಕ್ಕಾಗಲೆಲ್ಲ ಯಶ್ ತಮ್ಮ ದಾಂಪತ್ಯದ ಬಗ್ಗೆ, ಹೆಂಡತಿ ಬಗ್ಗೆ ನಾಲ್ಕು ಒಳ್ಳೆ ಮಾತು ಹೇಳದೇ ಮುಂದೆ ಹೋಗಲ್ಲ. ಹೆಚ್ಚಿನೆಲ್ಲ ಇಂಟರ್‌ವ್ಯೂಗಳಲ್ಲಿ ರಾಧಿಕಾ ಬಗ್ಗೆ ಪ್ರಶ್ನೆ ಕೇಳಿದಾಗಲೆಲ್ಲ ಆಕೆಯ ಬಗ್ಗೆ ಸಾಕಷ್ಟು ಉತ್ತಮ ಮಾತುಗಳನ್ನು ಯಶ್ ಆಡಿದ್ದರು. ಆದರೆ ಯಶ್ ಸದ್ಯ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಕಾರಣ ಎಲ್ಲರೂ ಯಶ್ ಬಳಿ ರಾಧಿಕಾ ಬಗ್ಗೆ ವಿಚಾರಿಸೋದೆ ಜಾಸ್ತಿ ಆಗಿದೆ. ರಾಧಿಕಾ ಪತಿ ಬಗ್ಗೆ ಮಾತನಾಡೋದು ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಅನ್ನೋ ಹಾಗಾಗಿದೆ.

ಆದರೆ ಯಶ್ ಹಾಗಲ್ಲ. ಅವರಿಗೆ ಫ್ಯಾಮಿಲಿ ಬಗ್ಗೆ ಪ್ರಶ್ನೆಗಳ ಬಾಣ ಬರುತ್ತಲೇ ಇರುತ್ತದೆ. ಇತ್ತೀಚೆಗೆ ಬಾಳಸಂಗಾತಿ, ನಟಿ ರಾಧಿಕಾ ಪಂಡಿತ್‌ ಬಗ್ಗೆ ಹೇಳಿರುವ ಯಶ್‌, ‘ನನ್ನಂತಹ ವಿಚಿತ್ರ ಆಲೋಚನೆ ಇರುವ ವ್ಯಕ್ತಿಯನ್ನು ಸಹಿಸಿಕೊಳ್ಳುವುದು ಸುಲಭ ಅಲ್ಲ. ಈ ನಿಟ್ಟಿನಲ್ಲಿ ನನಗೆ ರಾಧಿಕಾ ಬಾಳಸಂಗಾತಿಯಾಗಿ ಸಿಕ್ಕಿರುವುದಕ್ಕೆ ನಾನು ಅದೃಷ್ಟವಂತ. ನನ್ನ ಯಾವ ನಿರ್ಧಾರಕ್ಕೂ ಅವರು ಅಡ್ಡಿ ಬರುವುದಿಲ್ಲ. ಅವರಿಗೆ ಹೆಚ್ಚು ಸಮಯ ನೀಡಬೇಕು ಅನಿಸುತ್ತದೆ. ರಾಧಿಕಾ ನನಗೆ ಮೊದಲು ಬೆಸ್ಟ್‌ ಫ್ರೆಂಡ್‌, ನಂತರ ಹೆಂಡತಿ’ ಎಂದು ಹೇಳಿದ್ದರು. ಯಶ್ ತನ್ನ ನೂರಾರು ಕೋಟಿ ಬಜೆಟ್‌ನ ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಮನೆಯ ಕಾರ್ಯಕ್ರಮಗಳಲ್ಲಿ ಮಿಸ್ ಮಾಡದೇ ಭಾಗಿ ಆಗ್ತಾರೆ. ತನ್ನ ಫ್ಯಾಮಿಲಿಗೆ ಸಂಬಂಧಿಸಿದ ಯಾವ ಇವೆಂಟ್‌ಗಳೂ ಮಿಸ್ ಆಗದ ಹಾಗೆ ನೋಡಿಕೊಳ್ತಾರೆ. ಆದರೆ ಈಗ ಇದೇ ಯಶ್ ಮತ್ತು ರಾಧಿಕಾ ಕೋರ್ಟ್ ಮೆಟ್ಟಿಲೇರಿದ್ದಾರೆ.

ಸೆಲೆಬ್ರಿಟಿಗಳು ಕೋರ್ಟಿಗೆ ಹೋಗೋದು ಇತ್ತೀಚೆಗೆ ಸಾಮಾನ್ಯ ಅಂತಾಗಿದೆ. ಆದರೆ ಯಶ್, ರಾಧಿಕಾ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ಬೇರೆ ಇದೆ. ಇದು ನೀವೆಲ್ಲ ಅಂದುಕೊಂಡಿರುವ ಹಾಗೆ ರಿಯಲ್ ಲೈಫ್ ಕಥೆ ಅಲ್ಲ. ಬದಲಾಗಿ ಜಾಹೀರಾತು. ಹೌದು, ಇತ್ತೀಚೆಗೆ ಯಶ್ ಜಾಹೀರಾತೊಂದರಲ್ಲಿ ನಟಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಯಶ್ ವಕೀಲರ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇದು ಟಾಕ್ಸಿಕ್ ಸೀನ್ ಅನ್ನೋ ಮಾತು ಅಲ್ಲಲ್ಲಿ ಕೇಳಿಬರುತ್ತಿತ್ತು. ಆದರೆ ಅದು ಜಾಹೀರಾತು ಅನ್ನೋದು ಆಮೇಲೆ ಗೊತ್ತಾಯ್ತು. ಇದೀಗ ಆ ಜಾಹೀರಾತನ್ನು ಗಂಡ ಹೆಂಡತಿ ಇಬ್ಬರೂ ಹಂಚಿಕೊಂಡಿದ್ದಾರೆ. ಇದರಲ್ಲಿ ನಟಿ ರಾಧಿಕಾ ಪಂಡಿತ್ ಅವರು ಒಂದು ವಿಷಯಕ್ಕೆ ಕೋರ್ಟ್ ಕಟಕಟೆಯಲ್ಲಿ ನಿಂತಿದ್ದಾರೆ. ಅವರ ಪತಿ ಯಶ್ ಜೋರು ಜೋರಾಗಿ ವಾದ ಮಾಡಿದ್ದಾರೆ.

ಹಾಗಾದರೆ, ಅವರಿಬ್ಬರ ತಕರಾರು ಏನು ಎಂಬ ಪ್ರಶ್ನೆ ಮೂಡುವುದು ಸಹಜ.  ಇದರಲ್ಲಿ ರಾಧಿಕಾ ಪಂಡಿತ್ ಮೋಸಕ್ಕೆ ಒಳಗಾದ ಗ್ರಾಹಕಿಯ ಪಾತ್ರ ಮಾಡಿದ್ದಾರೆ. ಅವರಿಗೆ ನ್ಯಾಯ ಕೊಡಿಸಲು ಬಂದ ಲಾಯರ್ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಕಂಪನಿಯ ನಿಜವಾದ ಅಡುಗೆ ಎಣ್ಣೆ ಯಾವುದು ಎಂಬುದನ್ನು ಸಾಬೀತು ಮಾಡಲು ಯಶ್ ಫುಲ್ ಜೋಶ್‌ನಲ್ಲಿ ವಾದ ಮಾಡಿದ್ದಾರೆ.  ಸದ್ಯ ಯಶ್ ರಾಧಿಕಾ ಅವರ ಈ ಜಾಹೀರಾತು ಸಖತ್ ವೈರಲ್ ಆಗ್ತಿದೆ.


Share with

Leave a Reply

Your email address will not be published. Required fields are marked *