ಏತಡ್ಕ : ದೇವಾಲಯಗಳೆಂದರೆ ಪುಣ್ಯ ಎನ್ನುವ ಇಂಧನ ತುಂಬಿಸಿಕೊಳ್ಳುವ ತಾಣಗಳು. ಜೀವನದಲ್ಲಿ ಪಾಪ ನಿವಾರಣೆ, ಸತ್ಕರ್ಮದ ಜಾಗೃತಿ, ಕರ್ತವ್ಯ ನಿರತೆಯನ್ನು ಎಚ್ಚರಿಸುವ ಕೇಂದ್ರಗಳು. ಅವು ಸದಾ ಬೆಳಗ ಬೇಕು. ಅವುಗಳು ಬೆಳಕು ನೀಡಬೇಕು. ಪ್ರತಿದಿನ ದೇವಾಲಯದ ಬ್ರಹ್ಮ ಕಲಶೋತ್ಸವವನ್ನು ಕಣ್ಣಮುಂದೆ ಕಾಣುತ್ತಾ ನಮ್ಮ ನಮ್ಮ ಕರ್ತವ್ಯ ಪಾಲಿಸೋಣ.” ಎಂದು ಖ್ಯಾತಉದ್ಯಮಿ, ವಸಂತ ಪೈ ಅಭಿಪ್ರಾಯ ಪಟ್ಟರು. ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಭ್ಯಾಗತ ಎಡನಾಡು ಕ್ಷೀರೋತ್ಪಾದನಾ ಸಂಘದ ಅಧ್ಯಕ್ಷ, ಸಾಮಾಜಿಕ ಮುಂದಾಳು ಕಾರಿಂಜ ಹಳೆಮನೆ ಶಿವರಾಮ ಭಟ್ ದೇವಸ್ಥಾನವನ್ನು ಸುಂದರಗೊಳಿಸಿ ಬ್ರಹ್ಮ ಕಲಶೋತ್ಸವದ ಆಚರಣೆಯಲ್ಲಿ ಭಾಗಿಯಾಗುವುದು ಒಂದು ಜೀವನದ ಬಹುದೊಡ್ಡ ಅವಕಾಶ. ಊರಿನ ಕ್ಷೇಮವು ಅಭೂತಪೂರ್ವವಾಗಿ ವೃದ್ಧಿಯಾಗುವುದಕ್ಕೆ, ಮಹತ್ತರ ಬದಲಾವಣೆಗಳಾಗುವುದಕ್ಕೆ ಅನೇಕ ನಿದರ್ಶನಗಳಿವೆ. ಸುಂದರತೆ, ಸುವ್ಯವಸ್ಥೆ, ಸಮೃದ್ಧಿಯ ತಾಣವಾಗುವಲ್ಲಿ ಭಕ್ತರ ಕೊಡುಗೆ ಮುಖ್ಯ ಎಂದು ಹೇಳಿದರು. ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ವೈ. ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಡಾ. ಏತಡ್ಕ ಸುಬ್ರಾಯ ಭಟ್, ಉಪ ಗೌರವಾಧ್ಯಕ್ಷ ವೈ.ಶಂಕರ ಭಟ್, ವಿಟ್ಲ, ಬಂಟರ ಸಂಘದ ಕುಂಬ್ಳೆ ಫಿರ್ಕಾದ ಕಾರ್ಯದರ್ಶಿ ಅಶೋಕ್ ರೈ ಕೊರೆಕ್ಕಾನ, ಸಮಿತಿಯ ಖಜಾಂಜಿ ವೈ.ವಿ.ಸುಬ್ರಹ್ಮಣ್ಯ ಭಟ್, ಜೊತೆ ಕಾರ್ಯದರ್ಶಿ ಬಾಲಕೃಷ್ಣ ಕೆ.ಕೆ, ಕುಂಡಾಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಶಿಪ್ರಭಾ ವರುಂಬುಡಿ, ಸುಧಾ ಮಾಣಿತ್ತೋಡಿ, ಡಾ.ಅನ್ನಪೂರ್ಣೇಶ್ವರಿ ಏತಡ್ಕ ಇವರು ಶಿವಾರ್ಪಣಂ ಎನ್ನುವ ಬ್ರಹ್ಮ ಕಲಶೋತ್ಸವದ ಆಶಯ ಗೀತೆಯನ್ನು ಹಾಡಿದರು, ಪಶುವೈದ್ಯ ಡಾ.ವೈ.ವಿ.ಕೃಷ್ಣಮೂರ್ತಿ ಬದಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಖಜಾಂಜಿ ವೈ.ವಿ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಚಂದ್ರಶೇಖರ ಏತಡ್ಕ ನಿರೂಪಿಸಿ, ಜೊತೆ ಕಾರ್ಯದರ್ಶಿ ಬಾಲಕೃಷ್ಣ ಕೆ.ಕೆ ಕುಂಡಾಪು ವಂದಿಸಿದರು. ಕಾರ್ಯಕ್ರಮದ ಅನಂತರ ಕೇರಳ ಮರಾಠಿ ಸಂರಕ್ಷಣಾ ಸಮಿತಿಯ ಕುಂಬ್ಡಾಜೆ ಪ್ರಾದೇಶಿಕ ಸಮಿತಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘ ಏತಡ್ಕ , ಪೆರ್ಲ ವಲಯದ ಧರ್ಮಸ್ಥಳ ಸ್ವಸಹಾಯ ಸಂಘಗಳು, ಶ್ರೀ ಮಾತಾ ಹವ್ಯಕ ಭಜನಾ ಸಂಘ,ಬದಿಯಡ್ಕ ಸದಸ್ಯೆಯರು, ಊರ/ಪರವೂರ ಕಿಂಕರರೂ ಅಪಾರ ಸಂಖ್ಯೆಯಲ್ಲಿ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಶಿವಾರ್ಪಣಂ ಶ್ರಮದಾನ ಸೇವೆ- ೫ರಲ್ಲಿ ಪಾಲ್ಗೊಂಡಿದ್ದರು.