ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Share with

ಜಾರ್ಖಂಡ್: ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರಿಗೆ ಹಂಚಲು ಅಕ್ರಮವಾಗಿ ಹಣಗಳನ್ನು ಸಾಗಿಸುವುದು ಸಾಮಾನ್ಯ ಸಂಗತಿ ಅದಕ್ಕೆಂದೇ ನಗರದ ಪ್ರಮುಖ ಸ್ಥಳಗಳಲ್ಲಿ ಚುನಾವಣಾ ಅಧಿಕಾರಿಗಳು ವಾಹನಗಳನ್ನು ತಪಾಸಣೆ ನಡೆಸುತ್ತಾರೆ ಅದರಂತೆ ಜಾರ್ಖಂಡ್-ಬಿಹಾರ ಗಡಿಯ ಬಳಿಯಿರುವ ದಿಯೋರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ನಡೆಸುವ ವೇಳೆ ಕಾರಿನ ಡಿಕ್ಕಿಯಲ್ಲಿದ್ದ ಟಯರ್ ನಲ್ಲಿ ಕಂತೆ ಕಂತೆ ಹಣವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಜಾರ್ಖಂಡ್ ನಲ್ಲಿ ನವೆಂಬರ್ 13 ರಂದು ಮೊದಲ ಹಂತದ ಮತದಾನ ನಡೆದಿದ್ದು ಎರಡನೇ ಹಂತದ ಮತದಾನಕ್ಕೆ ತಯಾರಿ ನಡೆಯುತ್ತಿದೆ ಈ ನಡುವೆ ಚುನಾವಣಾ ಅಧಿಕಾರಿಗಳು ವಾಹನಗಳನ್ನು ತಪಾಸಣೆ ನಡೆಸುತ್ತಿರುವ ವೇಳೆ ಪೂರ್ವ ಮಾಹಿತಿಯ ಮೇರೆಗೆ ಕಾರಿನಲ್ಲಿ ಅಕ್ರಮವಾಗಿ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಅರಿತ ಅಧಿಕಾರಿಗಳು ಕಾರನ್ನು ತಡೆದು ತಪಾಸಣೆ ನಡೆಸಿದ್ದಾರೆ ಆದರೆ ಕಾರಿನಲ್ಲಿ ಎಲ್ಲೂ ಹಣ ಪತ್ತೆಯಾಗಿಲ್ಲ ಕೊನೆಯದಾಗಿ ಕಾರಿನ ಡಿಕ್ಕಿಯಲ್ಲಿದ್ದ ಟಯರ್ ತೆರೆದು ನೋಡಿದಾಗ ಅದರ ಒಳಭಾಗದಲ್ಲಿ ಕಂತೆ ಕಂತೆ ಹಣ ಇರುವುದು ಬೆಳಕಿಗೆ ಬಂದಿದೆ. ಎಣಿಕೆ ನಡೆಸಿದ ವೇಳೆ ದಾಖಲೆ ಇಲ್ಲದ ಐವತ್ತು ಲಕ್ಷ ಹಣ ವಶಕ್ಕೆ ಪಡೆದುಕೊಂಡಿದ್ದಾರೆ ಅಲ್ಲದೆ ಕಾರು ಸೇರಿದಂತೆ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಾರ್ಖಂಡ್‌ನ ಗೊಡ್ಡಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಸಂಸದ ನಿಶಿಕಾಂತ್ ದುಬೆ ಅವರು X ನಲ್ಲಿ ವಿಡಿಯೋ ಹಂಚಿಕೊಂಡಿದ್ದು ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಅದರ ಮಿತ್ರ ಕಾಂಗ್ರೆಸ್‌ನ ಮೇಲೆ ದಾಳಿ ಮಾಡಿದ್ದಾರೆ.


Share with

Leave a Reply

Your email address will not be published. Required fields are marked *