ಉಪ್ಪಳ :ಮಂಗಲ್ಪಾಡಿ ಚೆ ರುಗೋಳಿ ನಿವಾಸಿ ನಿವೃತ್ತ ಬ್ಯಾಂಕ್ ಮೆನೇಜರ್, ಸಾಮಾಜಿಕ, ಧಾರ್ಮಿಕ ಮುಂದಳು ರಾಮಚಂದ್ರ ಸಿ ( 70) ನಿಧನ ರಾದರು. ಬುಧವಾರ ರಾತ್ರಿ ಮನೆಯಲ್ಲಿ ಹೃದಯ ಘಾತ ಉಂಟಾಗಿದ್ದು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿ ಸಲಾಗಿದ್ದು ಅಲ್ಪ ಹೊತ್ತಿನಲ್ಲಿ ನಿಧಾನರಾದರು. ಇವರು ನಿವೃತ್ತ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಆಗಿದ್ದರು ಅಲ್ಲದೆ ಇವರು ಚೆ ರುಗೋಳಿ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಅಧ್ಯಕ್ಷರಾಗಿಯೂ, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷರಾಗಿಯೂ,ಶ್ರೀ ಸದಾಶಿವ ಕ್ಷೇತ್ರ ಅಂಬಾರು,ಐಲ ದುರ್ಗಾಪರಮೇಶ್ವರಿ ಕ್ಷೇತ್ರದ ಬ್ರಹ್ಮ ಕಲಶ ಸಮಿತಿಯ ಉಪಾಧ್ಯಕ್ಷರಾಗಿಯು , ಸತ್ಯನಾರಾಯಣ ಭಜನಾ ಸಂಘ, ಶ್ರೀ ಸದಾಶಿವ ಕಲಾವೃಂದ, ಕೊಂಡೆಯೂರು ಶ್ರೀ ನಿತ್ಯಾನಂದ ಯೋಗಾಶ್ರಮ , ಹೀಗೆ ಹಲವಾರು ಧಾರ್ಮಿಕ,ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಸೇವಾ ರೂಪದಲ್ಲಿ ವಿದ್ಯೆಯನ್ನು ಬೋಧಿಸಿದ್ದಾರೆ ಮೃತರು ಪತ್ನಿ ಜಯಂತಿ, ಮಕ್ಕಳಾದ ಸಾಯಿ ಪ್ರಸಾದ್, ಮಧುಸೂದನ, ಸೊಸೆ ಐಶ್ವರ್ಯ, ಸಹೋದರ ಭಾಸ್ಕರ ಹಾಗು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ