ನಿಮ್ಮ ಮನೆಯಲ್ಲಿ ಈ ಸಸ್ಯವಿದ್ದರೆ ಸಕ್ಕರೆ ಕಾಯಿಲೆ, ಕೀಲು ನೋವು ಹತ್ತಿರವೂ ಸುಳಿಯುವುದಿಲ್ಲ

Share with

ಇಂದು ಅನೇಕ ನಗರವಾಸಿಗಳ ಮನೆಗಳಲ್ಲಿ ನಾನಾ ರೀತಿಯ ಸಸ್ಯಗಳನ್ನು ನೋಡಬಹುದು. ಕೇವಲ ಹಳ್ಳಿಗಳಲ್ಲಿ ಮಾತ್ರವಲ್ಲ. ಇತ್ತೀಚಿನ ವರ್ಷಗಳಲ್ಲಿ ಪೇಟೆಯಲ್ಲಿ ವಾಸಮಾಡುವವರು ಸಹ ಮನೆಯಲ್ಲಿ ಚಿಕ್ಕ ಉದ್ಯಾನವನ ಮಾಡಿಕೊಳ್ಳುವ ಆಸಕ್ತಿ ತೋರಿಸುತ್ತಿದ್ದಾರೆ. ಸಣ್ಣ ಜಾಗವಿದ್ದರೂ ಅದನ್ನು ಕಾಲಿ ಬಿಡದೆಯೇ, ಅಲ್ಲಿ ಚಿಕ್ಕ -ಪುಟ್ಟ ಗಿಡಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವವರು ಮಡಕೆ, ಚಿಕ್ಕ ಚಿಕ್ಕ ಪಾಟ್ ಗಳಲ್ಲಿ ಗಿಡಗಳನ್ನು ಬೆಳೆಸುತ್ತಿದ್ದಾರೆ. ಇನ್ನು ಹಲವರು ತಮ್ಮ ಮನೆಯ ಸುತ್ತ ಮುತ್ತ ಇರುವ ಜಾಗದಲ್ಲಿ ಹೂ ಮತ್ತು ಹಣ್ಣುಗಳು ಮತ್ತು ಇತರ ಆಕರ್ಷಕ ಸಸ್ಯಗಳನ್ನು ಬೆಳೆಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಈ ರೀತಿಯ ಮನೆಯ ಬಾಲ್ಕನಿಯಲ್ಲಿ ಕೆಲವು ರೀತಿಯ ಸಸ್ಯಗಳನ್ನು ಬೆಳೆಸುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದರಲ್ಲಿಯೂ ಎಲ್ಲರ ಮನೆಯಲ್ಲಿಯೂ ಇರಲೇಬೇಕಾದ ಸಸ್ಯಗಳಲ್ಲಿ ಪಾರಿಜಾತವೂ ಒಂದು. ಇದನ್ನು ಕೆಲವರು ರಾತ್ರಿ ಮಲ್ಲಿಗೆ ಎಂದು ಕರೆಯುತ್ತಾರೆ. ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಯಾಕಾಗಿ ಮನೆಗಳಲ್ಲಿ ಬೆಳೆಸಬೇಕು? ಇಲ್ಲಿದೆ ಮಾಹಿತಿ.

ಮಧುಮೇಹಿಗಳಿಗೆ ಪ್ರಯೋಜನಕಾರಿ
ಪಾರಿಜಾತ ಸಸ್ಯದ ಹೂವುಗಳು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ. ಟೈಪ್ 2 ಮಧುಮೇಹದ ಚಿಕಿತ್ಸೆಯಲ್ಲಿ ಅವುಗಳನ್ನು ಬಳಸಲಾಗುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಈ ಹೂವುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತವೆ. ರಾತ್ರಿ ಸಮಯದಲ್ಲಿ ಪಾರಿಜಾತ ಹೂವುಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಆ ನೀರನ್ನು ಸೋಸಿ ಮರುದಿನ ಮಧ್ಯಾಹ್ನ ಮತ್ತು ಸಂಜೆ ಹೊತ್ತಿನಲ್ಲಿ ಕುಡಿಯಿರಿ. ಈ ರೀತಿ ಮಾಡಿ ಕುಡಿದರೆ, ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕೀಲು ನೋವಿಗೆ ರಾಮಬಾಣ
ಪಾರಿಜಾತ ಮರದ ಕೊಂಬೆಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಒಣಗಿಸಿ ಮೃದುವಾಗಿ ಪುಡಿ ಮಾಡಿಕೊಂಡು ಇದನ್ನು ಗಾಳಿಯಾಡದ ಪಾತ್ರೆಯಲ್ಲಿ ಹಾಕಿ ಮುಚ್ಚಳ ಮುಚ್ಚಿ ಸಂಗ್ರಹಿಸಿಟ್ಟುಕೊಳ್ಳಿ. ತಜ್ಞರ ಪ್ರಕಾರ, ಈ ಪುಡಿಯನ್ನು ಅರ್ಧ ಟೀ ಸ್ಪೂನ್ ತೆಗೆದುಕೊಂಡು ಒಂದು ಲೋಟ ನೀರಿಗೆ ಬೆರೆಸಿ ಕುಡಿಯುವುದರಿಂದ ಮಲೇರಿಯಾ ಮತ್ತು ಕೀಲು ನೋವು ಕಡಿಮೆಯಾಗುತ್ತದೆ.


Share with

Leave a Reply

Your email address will not be published. Required fields are marked *