ಉಪ್ಪಳ: ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಸೇವಾ ವಿಭಾಗದ ಆಶ್ರಯದಲ್ಲಿ “ಏನಿದು ವಖ್ಪ್ ಬೋರ್ಡ್? ವಿಶೇಷ ತಿಳುವಳಿಕಾ ಜಾಗೃತಿ ಶಿಬಿರ 1-12-2024ರಂದು ಭಾನುವಾರ ಸಂಜೆ 4ಗಂಟೆಗೆ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿತಲ್ಲಿ ನಡೆಯಲಿದೆ. ಯುವ ವಾಗ್ಮಿ ಲತೇಶ್ ಬಾಕ್ರಬೈಲ್ ಮಾಹಿತಿ ನೀಡುವರು. ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸುವರು. ಸಹಕಾರ ಭಾರತಿ ಕೇರಳ ರಾಜ್ಯಧ್ಯಕ್ಷ , ಖ್ಯಾತ ನ್ಯಾಯವಾದಿ ಕರುಣಾಕರ್ ನಂಬಿಯಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.