ಸೌದಿ ಅರೇಬಿಯಾದಲ್ಲಿ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಪೊಸೋಟು ನಿವಾಸಿ  ಮಹಿಳೆ ಮೃತ್ಯು

Share with


ಮಂಜೇಶ್ವರ:  ಸೌದಿ ಅರೋಬಿಯಾದಲ್ಲಿ ಎರಡು ತಿಂಗಳ ಹಿಂದೆ ನಡೆದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮಂಜೇಶ್ವರ  ಸಮೀಪದ ಪೊಸೋಟು ನಿವಾಸಿ ಕುಂಞÂ ಅಹಮ್ಮದ್ ಎಂಬವರ ಪತ್ನಿ ಸಫಿಯಾ [58] ಭಾನುವಾರ ಮಧ್ಯಾಹ್ನ ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದಂಪತಿಯರು ಹಲವು ತಿಂಗಳ ಹಿಂದೆ ಸೌದಿ ಅರೆಬೀಯಾದಲ್ಲಿರುವ ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿದ್ದರು.  ಎರಡು ತಿಂಗಳ ಹಿಂದೆ ದಂಪತಿ ಹಾಗೂ ಮಕ್ಕಳು, ಸೊಸೆಯಂದಿರು ಸೌದಿ ಅರೇಬಿಯಾದಿಂದ  ಕಾರಿನಲ್ಲಿ ರಿಯಾದ್‌ಗೆ ಸಂಬoಧಿಕರ ಮನೆಗೆ ಸಂಚರಿಸುತ್ತಿರುವಾಗ  ಸೌದಿ ಅರೇಬಿಯಾದಿಂದ ಸುಮಾರು 150 ಕಿಲೋ ಮೀಟರ್ ದೂರದಲ್ಲಿ ಕಾರು ಅಪಘಾತಕ್ಕೀಡಾಗಿದೆ. ಈ ವೇಳೆ ಸಫಿಯಾ ರವರು ಗಂಭೀರ ಗಾಯಗೊಂಡಿದ್ದು,  ಹಾಗೂ ಉಳಿದವರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.  ಆದರೆ ಸಫಿಯ ರವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು [ದಿ] ಅಬ್ದುಲ್ ರಹಿಮಾನ್ ಹಾಗೂ [ದಿ] ಅವ್ವಮ್ಮ ದಂಪತಿಯರ ಪುತ್ರಿಯಾಗಿದ್ದಾರೆ. ಮಕ್ಕಳಾದ ಸವಾದ್, ಸಾಹಿದ್, ಸೊಸೆಯಂದಿರಾದ ಸಂಶೀರ, ಮುಸ್‌ಹಾನ, ಸಹೋದರ ಸಹೋದರಿಯರಾದ  ಅಬ್ದುಲ್ಲ, ಯೂಸಫ್, ಮೆಹಮೂದ್, ಅಬ್ದುಲ್ ಕಾದರ್, ಉಮ್ಮಾಲಿಮ್ಮ, ಜಮೀಲ, ಸುಬೈದ, ತಾಹಿರ ಹಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಸoಕಾರ ಸೌದಿಯದಲ್ಲಿಯೇ ನಡೆಸಲಾಗುವುದಾಗಿ ಸಂಬAಧಿಕ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *