ಪೈವಳಿಕೆ: ಆರೋಗ್ಯ ರಕ್ಷಣಾ ವೇದಿಕೆ ಚಿಪ್ಪಾರು ಇದರ ಪ್ರಯೋಜಕತ್ವದಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್ ಹಾಗೂ ಕೆ.ಯಂ.ಸಿ ಆಸ್ಪತ್ರೆ ಅತ್ತಾವರ ಲಾಯಲ್ಟಿ ಕಾರ್ಡ್ ನೊಂದಾವಣೆ ಕಾರ್ಯಕ್ರಮ ಚಿಪ್ಪಾರು ಹಿಂದೂ ಎ.ಯು.ಪಿ ಶಾಲೆಯಲ್ಲಿ ನಡೆಯಿತು. ಶಾಲಾ ಮೆನೇಜರ್ ಗಂಗಾಧರ ಬಲ್ಲಾಳ್ ಉದ್ಘಾಟಿಸಿದರು. ತಿರುಮಲೇಶ್ವರ ಭಟ್ ಪೆರ್ಲ ಅಧ್ಯಕ್ಷತೆ ವಹಿಸಿದರು. ವೇದಿಕೆಯ ಸದಸ್ಯರಾದ ಹಮೀದ್ ಕಾಯರ್‌ಕಟ್ಟೆ, ಕೃಷ್ಣ ಮಾಸ್ತರ್, ಶಾಲಾ ಮುಖ್ಯೋಪಧ್ಯಾಯಿನಿ ವಿದ್ಯಾಲಕ್ಷ್ಮಿ, ಕೆಬಿರ್ ಚಿಪ್ಪಾರು, ಅಶ್ರಫ್ ಎಡಂಬಲ, ಇರ್ಷಾದ್.ಎನ್, ಪುಷ್ಪರಾಜ ಶೆಟ್ಟಿ ಪೆರ್ವೋಡಿ, ಜಯಂತ ಚಿಪ್ಪಾರು ಮೊದಲಾದವರು ಉಪಸ್ಥಿತರಿದ್ದರು. ವೇದಿಕೆಯ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಚಿಪ್ಪಾರು ಸ್ವಾಗತಿ, ಸದಾನಂದ .ಎ ವಂದಿಸಿದರು. ಸಂಚಾಲಕ ರಾಮ ಪ್ರಸಾದ್ ಬಲ್ಲಾಳ್ ನಿರೂಪಿಸಿದರು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಿರಿಯ ನಾಗರಿಕರ ಮನೆ ಸಂಪರ್ಕಿಸಿ ಆಯುಸ್ಮಾನ್ ಕಾರ್ಡ್ ನೊಂದಾಯಿಸಲು ಅಶೋಕ ಕೋರಿಕ್ಕಾರು ಹಾಗೂ ಲಾಯಲ್ಟಿ ಕಾರ್ಡ್ ನೊಂದಾವಣೆಯಲ್ಲಿ ಉದಯ ಸಹಕರಿಸಿದರು.