ಇದೀಗ ಚಳಿಗಾಲ ಆರಂಭವಾಗಿದೆ, ಶೀತ ವಾತಾವರಣವಿರುವ ಕಾರಣ ನೀರು ಕುಡಿಯಬೇಕೆಂದೇನಿಸುವುದಿಲ್ಲ. ಈ ಚಳಿಯ ವಾತಾವರಣದಿಂದಾಗಿ ಈ ಋತುವಿನಲ್ಲಿ ನೀರಿನ ದಾಹ ಕಡಿಮೆಯಾದರೂ ದೇಹಕ್ಕೆ ಅಗತ್ಯವಾಗಿ ನೀರು ಬೇಕಾಗುತ್ತದೆ. ಆದರೆ ದೇಹದಲ್ಲಿ ನೀರಿನ ಅಂಶವು ಕಡಿಮೆಯಾದರೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಹೀಗಾಗಿ ಮೈ ಕೊರೆಯುವ ಚಳಿಯ ನಡುವೆ ಸೇವಿಸುವ ಆಹಾರದಿಂದ ಹಿಡಿದು, ಕುಡಿಯುವ ನೀರಿನ ಪ್ರಮಾಣದ ಬಗ್ಗೆಯೂ ಹೆಚ್ಚು ಗಮನಹರಿಸಬೇಕು.
ಬಾಯಿಯ ದುರ್ವಾಸನೆ:
ಕಡಿಮೆ ನೀರು ಕುಡಿಯುವ ಅಭ್ಯಾಸದಿಂದ ಬಾಯಿ ಒಣಗಲು ಪ್ರಾರಂಭಿಸುತ್ತದೆ. ಇದು ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಲು ದಾರಿ ಮಾಡಿಕೊಡುತ್ತವೆ. ಇದರಿಂದ ಬಾಯಿಯಿಂದ ಕೆಟ್ಟ ವಾಸನೆಯೂ ಬರುತ್ತದೆ.
ಕಡಿಮೆ ಬೆವರುವಿಕೆ ಹಾಗೂ ಮೂತ್ರ ವಿಸರ್ಜನೆ:
ದೇಹವು ನಿರ್ಜಲೀಕರಣವಾದಾಗ ಬೆವರು ಮತ್ತು ಮೂತ್ರ ವಿಸರ್ಜನೆಯು ಕಡಿಮೆಯಾಗುತ್ತದೆ. ಇದರಿಂದ ವಿಷವು ದೇಹದಿಂದ ಹೊರಬರಲು ಸಾಧ್ಯವಾಗಲ್ಲ. ಇದು ಇನ್ನಿತ್ತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ದಾರಿ ಮಾಡಿಕೊಡುತ್ತದೆ.
ತಲೆನೋವು:
ನೀರಿನ ಕೊರತೆಯಿಂದಾಗಿ ಮೆದುಳಿನ ಜೀವಕೋಶಗಳು ತಾತ್ಕಾಲಿಕವಾಗಿ ಕುಗ್ಗುವುದರಿಂದ ತಲೆನೋವಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಮಲಬದ್ಧತೆ:
ನೀರಿನ ಕೊರತೆಯು ಹೊಟ್ಟೆಯಲ್ಲಿ ಆಮ್ಲ ರಚನೆಯ ಪ್ರಮಾಣವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಹೊಟ್ಟೆಯಲ್ಲಿ ಅನಿಲವು ರೂಪುಗೊಳ್ಳುತ್ತವೆ. ಮಲಬದ್ಧತೆ ಸೇರಿದಂತೆ, ಎದೆಯುರಿಯಂತಹ ಸಮಸ್ಯೆಗಳು ಉಂಟಾಗುತ್ತದೆ.