ಇತ್ತೀಚಿಗಷ್ಟೇ ಗೋಡೆ ಮೇಲೆ ಟೇಪ್ ಹಾಕಿ ಅಂಟಿಸಿದ್ದ ಬಾಳೆಹಣ್ಣೊಂದು ಬರೋಬ್ಬರೀ 52 ಕೋಟಿಗೆ ಹರಾಜಿನಲ್ಲಿ ಮಾರಾಟವಾಗಿ ಭಾರಿ ಸದ್ದು ಮಾಡಿತ್ತು. ನ್ಯೂಯಾರ್ಕ್‌ನಲ್ಲಿ ನಡೆದ ಈ ಹರಾಜು ಪ್ರಕ್ರಿಯೆಯಲ್ಲಿ ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಸುಮಾರು 6.2 ಮಿಲಿಯನ್ ಡಾಲರ್ ಅಂದರೆ ಭಾರತದ ಕರೆನ್ಸಿ ಪ್ರಕಾರ 52,45,89,440 ಕೋಟಿ ಕೊಟ್ಟು ಖರೀದಿಸಿದ್ದರು. ಇದೀಗ ಜಸ್ಟಿನ್ ಈ ಬಾಳೆ ಹಣ್ಣನ್ನು ಒಂದೇ ಕ್ಷಣದಲ್ಲಿ ತಿಂದು ಮುಗಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಒಂದು ಬಾಳೆ ಹಣ್ಣಿಗೆ 52 ಕೋಟಿ ರೂ. ಕೊಟ್ಟು ಖರೀದಿಸುವ ಅವಶ್ಯಕತೆ ಏನಿದೆ ಎಂದು ನಿಮಗೆ ಅನಿಸಬಹುದು. ಆದರೆ ಕೆಲವೊಮ್ಮೆ ಕಲಾವಿದರ ಹೆಸರು ಕೇಳಿದಾಕ್ಷಣ ಅವರ ಕಲಾಕೃತಿಗಳು ಕಂಡಿಯರದ ರೀತಿಯಲ್ಲಿ ಹಜಾರಿನಲ್ಲಿ ಮಾರಾಟವಾಗುತ್ತದೆ. ಈ ಸಮಯದಲ್ಲಿ ದುಡ್ಡಿಗಿಂತ ಆ ಕಲಾಕೃತಿಯನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ಹಠ ಅವರಲ್ಲಿ ಇರುತ್ತವೆ. ಅದೇ ರೀತಿ ಇದೀಗ ಈ ಬಾಳೆ ಹಣ್ಣು ಹರಾಜಾಗಿದೆ. ಇದು ಕೇವಲ ಒಂದು ಬಾಳೆಹಣ್ಣನ್ನು ಟೇಪ್ ಹಚ್ಚಿ ಗೋಡೆ ಮೇಲೆ ಇಡಲಾಗಿದೆ ಅಷ್ಟೇ. ಆದರೂ ಹರಾಜಿನಲ್ಲಿ ಮಾರಾಟವಾಗಲು ಕಾರಣ ಇದು ಇಟಲಿಯ ಖ್ಯಾತ ಕಲಾವಿದ(Visual artist) ಮೌರಿಜೀಯೋ ಕ್ಯಾಟೆಲನ್ (Maurizio Cattelan) ಎಂಬಾತನ ಕಲಾಕೃತಿ. ಇಲ್ಲಿಯವರೆಗೆ ಇತನ ಹಲವು ವಿಚಿತ್ರ ಎನಿಸುವ ಕಲಾಕೃತಿಗಳು ಭಾರಿ ಮೊತ್ತದಲ್ಲಿ ಹರಾಜಾಗಿವೆ.