ಬೆಂಗಳೂರು TO ಅಯೋಧ್ಯೆ.. ನೇರ ವಿಮಾನ ಸೇವೆ

Share with

ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನ ಸೇವೆ ಆರಂಭವಾಗಲಿದೆ. ಇಂಡಿಗೋ ಏರ್‌ಲೈನ್ಸ್ ಸಂಸ್ಥೆ ಡಿ. 31ರಿಂದಲೇ ಈ ಕಾರ್ಯಾಚರಣೆಗೆ ಚಾಲನೆ ನೀಡಲಿದೆ.

ಆರಂಭಿಕ ಹಂತದಲ್ಲಿ ವಿಮಾನಗಳು ಹಗಲಿನ ಸಮಯದಲ್ಲಿ ಮಾತ್ರ ಹಾರಾಡಲಿವೆ. ವಿಮಾನ 6E 934 ಬೆಳಗ್ಗೆ 11:40ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಮಧ್ಯಾಹ್ನ 2:25ಕ್ಕೆ ಅಯೋಧ್ಯೆಗೆ ಆಗಮಿಸಲಿದೆ.

ವಾಪಸ್ ಬರುವಾಗ 6E 926 ವಿಮಾನ ಅಯೋಧ್ಯೆಯಿಂದ ಮಧ್ಯಾಹ್ನ 2:55 ಕ್ಕೆ ಹೊರಟು ಸಂಜೆ 5:30ಕ್ಕೆ ಬೆಂಗಳೂರು ತಲುಪಲಿದೆ.


Share with