ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

Share with

ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಲಿದೆ.

ಈ ಅಧಿವೇಶನ 10 ದಿನ ನಡೆಯಲಿದ್ದು, ವಕ್ಸ್, ಮುಡಾ, ಬಾಣಂತಿಯರ ಸಾವು ಸೇರಿ ಹಲವು ವಿಷಯಗಳನ್ನಿಟ್ಟುಕೊಂಡು ಸರ್ಕಾರದ ಮೇಲೆ ಮುಗಿ ಬೀಳಲು ವಿಪಕ್ಷಗಳು ಸನ್ನದ್ಧವಾಗಿವೆ.

ಅತ್ತ ಪ್ರತಿಪಕ್ಷಗಳನ್ನು ಹಣಿಯಲು ಸರ್ಕಾರ ಪ್ರತಿ ತಂತ್ರ ರೂಪಿಸಿದ್ದು, ಕೊರೊನಾ ಹಗರಣ ಕುರಿತ ಕುನ್ಹಾ ರಿಪೋರ್ಟ್, ಬಿಜೆಪಿ ಕಾಲದ ಹಗರಣಗಳನ್ನು ಪ್ರಸ್ತಾಪಿಸಲು ಕಾಂಗ್ರೆಸ್ ಸಹ ಸಿದ್ಧತೆ ನಡೆಸಿದೆ.


Share with