ಮುಂಬೈನ ಪಶ್ಚಿಮ ಕುರ್ಲಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 7 ಮಂದಿ ಸಾವಿಗೀಡಾಗಿದ್ದು, 49 ಜನರು ಗಾಯಗೊಂಡಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ಬೃಹತ್ ಮುಂಬೈ ವಿದ್ಯುತ್ ಸರಬರಾಜು & ಸಾರಿಗೆ ಸಂಸ್ಥೆಯ (ಬೆಸ್ಟ್) ಬಸ್ ಪಾದಚಾರಿಗಳು ಹಾಗೂ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಸೋಮವಾರ ರಾತ್ರಿ 9.30ರ ವೇಳೆಗೆ ಮುಂಬೈನ ಪಶ್ಚಿಮ ಕುರ್ಲಾದಲ್ಲಿರುವ ಎಸ್.ಜಿ.ಬಾರ್ವೆ ಮಾರ್ಗದಲ್ಲಿ ಈ ಘಟನೆ ನಡೆದಿದೆ.
ಸೋಮವಾರ ಮೂವರು ಮೃತಪಟ್ಟಿದ್ದರು. ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.