
ಬೆಳಗ್ಗೆ ಎದ್ದು ಬೆಡ್ ಕಾಫಿ ಕುಡಿಯೋ ಬದಲು ಒಂದು ಲೋಟ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ, ಆಮೇಲೆ ನಿಮ್ಮ ಆರೋಗ್ಯದಲ್ಲಿ ಆಗುವ ಬದಲಾವಣೆಗಳನ್ನು ನೀವೇ ನೋಡಿ.
ತುಂಬಾ ಜನರು ಇಂದಿಗೂ ಸಹ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆರೋಗ್ಯದ ವಿಚಾರದಲ್ಲಿ ಇದು ಮ್ಯಾಜಿಕ್ ಮಾಡುತ್ತದೆ ಎಂದು ಹೇಳುತ್ತಾರೆ. ಹಾಗಾಗಿಯೇ ನಾವು ಗಮನಿಸುವ ಹಲವರು ತುಂಬಾ ಆರೋಗ್ಯದಿಂದ ಇರುತ್ತಾರೆ.
ಹಾಗಾದರೆ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯ ಪ್ರಯೋಜನಗಳನ್ನು ನೀಡುತ್ತಾ ಎಂದು ಕೇಳುವುದಾದರೆ, ಆರೋಗ್ಯ ತಜ್ಞರು ಹಾಗೂ ಸಂಶೋಧಕರು ಹೌದು ಎನ್ನುತ್ತಾರೆ.
ಕೇವಲ ನೀರು ಕುಡಿಯುವುದು ಮಾತ್ರವಲ್ಲ ನೀರಿನ ತಾಪಮಾನ ಎಷ್ಟಿದೆ ಎಂಬುದು ಕೂಡ ಆರೋಗ್ಯಕ್ಕೆ ಬಹಳ ಮುಖ್ಯ ಎಂಬುದು ಅವರ ವಾದ. ಆಯುರ್ವೇದ ಪದ್ಧತಿಯಿಂದ ಸಾಂಪ್ರದಾಯಿಕ ಚೀನಾ ಔಷಧೀಯ ಪದ್ಧತಿ ಹೇಳುವ ಹಾಗೆ ಪ್ರತಿ ದಿನ ಉಗುರು ಬೆಚ್ಚಗಿನ ನೀರು ಕುಡಿಯುವುದು ಈ ಕೆಳಗಿನ ಆರೋಗ್ಯ ಪ್ರಯೋಜನಗಳನ್ನು ಮನುಷ್ಯನಿಗೆ ನೀಡುತ್ತದೆ.
ತೂಕ ನಿಯಂತ್ರಣ :

- ನಾವು ಬೆಳಗಿನ ಸಮಯದಲ್ಲಿ ಎದ್ದು ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡಿಕೊಳ್ಳಬಹುದು.
- ಆರೋಗ್ಯ ತಜ್ಞರು ಹೇಳುವ ಹಾಗೆ, ಉಗುರು ಬೆಚ್ಚಗಿನ ನೀರು ನಮ್ಮ ದೇಹದ ತಾಪ ಮಾನವನ್ನು ಹೆಚ್ಚು ಮಾಡುತ್ತದೆ. ಹೀಗಾಗಿ ನಮ್ಮ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆ ಹೆಚ್ಚಾಗುತ್ತದೆ. ಇದು ನಮ್ಮ ದೇಹದಿಂದ ಹೆಚ್ಚು ವರಿ ಕ್ಯಾಲೋರಿಗಳನ್ನು ಕರಗುವಂತೆ ಮಾಡಿ ನಮ್ಮ ಕಿಡ್ನಿಗಳು ಚೆನ್ನಾಗಿ ಕೆಲಸ ಮಾಡುವಂತೆ ನೋಡಿ ಕೊಳ್ಳುತ್ತದೆ.
ಜೀರ್ಣ ಶಕ್ತಿ ಹೆಚ್ಚಿಸುತ್ತದೆ:

- ಉಗುರು ಬೆಚ್ಚಗಿನ ನೀರು ನಮ್ಮ ದೇಹದಿಂದ ಬೇಡದ ವಿಷಕಾರಿ ಅಂಶಗಳನ್ನು ದೂರ ಇರಿಸುವಲ್ಲಿ ನೆರವಾಗುತ್ತದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಸುಲಭವಾಗಿ ನಾವು ಸೇವಿಸಿದ ಆಹಾರ ಜೀರ್ಣವಾಗುವಂತೆ ಮಾಡುತ್ತದೆ.
- ಒಂದು ವೇಳೆ ನಿಮಗೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಇದ್ದರೆ, ಅಂದರೆ ಮಲಬದ್ಧತೆ, ಆಮ್ಲೀಯತೆ, ಕೆಮ್ಮು ಅಥವಾ ಶೀತ ಇಂತಹ ಯಾವುದೇ ಸಮಸ್ಯೆ ಇದ್ದರೂ ಸಹ ಬೆಳಗಿನ ಸಂದರ್ಭದಲ್ಲಿ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಲಾಭವಿದೆ. ಹೀಗೆಂದು ಇತ್ತೀಚೆಗಷ್ಟೇ ಜರ್ನಲ್ ಆಫ್ ದ ಸೊಸೈಟಿ ಆಫ್ ಗ್ಯಾಸ್ಟ್ರೋಎಂಟರ್ಲಜಿ ನರ್ಸಸ್ ಅಂಡ್ ಅಸೋಸಿಯೇಟ್ಸ್ ತನ್ನ ಅಧ್ಯಯನದ ವರದಿಯಲ್ಲಿ ತಿಳಿಸಿರುವ ಹಾಗೆ ಹೇಳ ಲಾಗಿದೆ.
ನೋವಿಗೆ ರಾಮಬಾಣ:

ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಮ್ಮ ಹೊಟ್ಟೆಗೆ ಸಂಬಂಧಪಟ್ಟ ಮಾಂಸ ಖಂಡಗಳು ಸೆಳೆತ ಹಾಗೂ ನೋವಿನಿಂದ ಮುಕ್ತಿ ಹೊಂದುತ್ತವೆ. ಏಕೆಂದರೆ ಉಗುರು ಬೆಚ್ಚಗಿನ ನೀರು ನಮ್ಮ ದೇಹದ ಎಲ್ಲಾ ಭಾಗಗಳಿಗೆ ತಲುಪಿರುವ ರಕ್ತನಾಳ ಗಳಲ್ಲಿ ಅತ್ಯುತ್ತಮ ರಕ್ತ ಸಂಚಾರ ಉಂಟು ಮಾಡುತ್ತದೆ.
ಮಲಬದ್ಧತೆ ದೂರ ಮಾಡುತ್ತದೆ:

ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಮ್ಮ ದೇಹದ ವಿಷಕಾರಿ ಅಂಶಗಳು ದೂರವಾಗುತ್ತವೆ ಮತ್ತು ಹೊಟ್ಟೆಗೆ ಸಂಬಂಧಪಟ್ಟ ಹಾಗೆ ಕಂಡುಬರುವ ಹೊಟ್ಟೆ ಉಬ್ಬರ, ಹೊಟ್ಟೆ ನೋವು ಮತ್ತು ಅಸ್ವಸ್ಥತೆ ಸಮಸ್ಯೆಗಳು ನಿವಾರಣೆ ಆಗುತ್ತವೆ. ಉಗುರು ಬೆಚ್ಚಗಿನ ನೀರು ನಮ್ಮ ಕರುಳಿನ ಚಲನೆಯನ್ನು ನಿಯಂತ್ರಣ ಮಾಡುತ್ತದೆ ಜೊತೆಗೆ ಮಲಬದ್ಧತೆ ಸಮಸ್ಯೆಯನ್ನು ಪರಿಹರಿಸುತ್ತದೆ.
ತ್ವಚೆಯ ಆರೋಗ್ಯಕ್ಕೆ ಸಹಾಯಕ:

- ಉಗುರು ಬೆಚ್ಚಗಿನ ನೀರು ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ದೂರ ಮಾಡುವುದರ ಜೊತೆಗೆ ಕರುಳಿನ ಚಲನೆಯನ್ನು ಉತ್ತಮ ಪಡಿಸುತ್ತದೆ.
- ಇದರಿಂದ ನಮ್ಮ ಚರ್ಮ ಬಹಳ ಸ್ವಚ್ಛವಾಗುತ್ತದೆ ಮತ್ತು ಯಾವುದೇ ತರಹದ ವಯಸ್ಸಾ ಗುವಿಕೆ ಪ್ರಕ್ರಿಯೆಗೆ ಉತ್ತೇಜನ ಕೊಡುವ ವಿಷಕಾರಿ ಅಂಶಗಳು ಚರ್ಮದಿಂದ ದೂರವಾಗುತ್ತವೆ. ಇದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ.