
ಕೋಲ್ಕತ್ತಾದ ಈ ವ್ಯಕ್ತಿ ತನಗೊಂದು ಹೆಸರು ತಂದುಕೊಟ್ಟರು. ಮಧ್ಯಮ ವರ್ಗದ ಬಂಗಾಳಿ ಕುಟುಂಬದಿಂದ ಬಂದ ಅವರ ವೃತ್ತಿ ಆಯ್ಕೆ ಅವರ ಕುಟುಂಬದಿಂದಲೇ ವಿರೋಧ ಎದುರಿಸಿತ್ತು. ಹಣಕಾಸಿನ ಸಮಸ್ಯೆಗಳು ಆ ಸಮಯದಲ್ಲಿ ಅವರ ಕನಸು ಬೆನ್ನಟ್ಟಲು ಅಡ್ಡಿಯಾಗಿದ್ದವು. ಸಾಮರ್ಥ್ಯವಿದ್ದರೂ ಸೈಲೆಂಟಾಗಿರಬೇಕಾಗಿತ್ತು. ಆದರೆ ಅವರ ಕನಸು ಇಂದು ಪ್ರಪಂಚದ ಒಂದು ದೊಡ್ಡ ಫ್ಯಾಷನ್ ಬ್ರ್ಯಾಂಡ್ ರೂಪದಲ್ಲಿ ಬೆಳೆದು ನಿಂತಿದೆ.
ಅವರ ತಂದೆಯ ಮರಣದ ನಂತರ ಅವರು ಬಹಳಷ್ಟು ಜವಾಬ್ದಾರಿ, ಸಮಸ್ಯೆಗಳನ್ನು ಎದುರಿಸಿದರು. ಕೇವಲ 15ನೇ ವಯಸ್ಸಿನಲ್ಲೇ ಅವರು ಮನೆ ಬಿಟ್ಟು ಗೋವಾಕ್ಕೆ ಓಡಿಹೋದರು. ಅಲ್ಲಿ ಅವರು ವೈಟರ್ ಆಗಿ ಕೆಲಸ ಮಾಡಿದರು. ಹೋಟೆಲ್ಗಳಲ್ಲಿ ಪಾತ್ರೆಗಳನ್ನು ತೊಳೆದರು.

ಇದು ಇನ್ಯಾರೂ ಅಲ್ಲ, ವಿಶ್ವಪ್ರಸಿದ್ಧವಾಗಿರುವ ಇಂಡಿಯನ್ ಫ್ಯಾಷನ್ ಬ್ರ್ಯಾಂಡ್ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ. ಅವರು NIFT ನಲ್ಲಿ ಅಧ್ಯಯನ ಮಾಡಲು ಬಯಸಿದ್ದರು. ಆದರೆ ಅವರ ಪೋಷಕರು ಅದಕ್ಕೆ ಅನುಮತಿಸಿಲ್ಲ. ಆದರೆ ಅವರು ಡಿಸೈನರ್ ಆಗೋದನ್ನು ತಡೆಯೋಕೆ ಯಾರಿಂದಲೂ ಆಗಲಿಲ್ಲ.
ಯಾವ ಅರ್ಥಿಕ ಸಮಸ್ಯೆಯೂ ಅವರ ಕನಸಿಗೆ ಅಡ್ಡಿಯಾಗಲಿಲ್ಲ. ಅವರು ತಮ್ಮ ಪುಸ್ತಕಗಳನ್ನು ಮಾರಾಟ ಮಾಡಿ ಶಿಕ್ಷಣಕ್ಕಾಗಿ ಹಣ ಹೊಂದಿಸಲು ಕೂಡಾ ಪ್ರಯತ್ನಿಸಿದ್ದರು.
ಅವರು 1999 ರಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯಿಂದ ಪದವಿ ಪಡೆದರು. ಅವರ ಸಹೋದರಿಯ ಸಹಾಯ ಹಾಗೂ ರೂ 20,000 ಸಾಲದೊಂದಿಗೆ ಸಬ್ಯಸಾಚಿ ತಮ್ಮದೇ ಆದ ಲೇಬಲ್ ಅನ್ನು ಪ್ರಾರಂಭಿಸಿದರು.
ಇದು ಭಾರತದ ಮೊದಲ ಜಾಗತಿಕ ಫ್ಯಾಷನ್ ಬ್ರ್ಯಾಂಡ್ ಆಗಿತ್ತು. ಪಾಕಿಸ್ತಾನದಂತಹ ನೆರೆಯ ರಾಷ್ಟ್ರಗಳಲ್ಲಿ ಮಾತ್ರವಲ್ಲದೆ ಯುಎಇ, ಇಟಲಿ ಮತ್ತು ದುಬೈನ ಜನರು ಸಬ್ಯಸಾಚಿ ಡಿಸೈನರ್ ಉಡುಗೆಗಳಿಗೆ ಮುಗಿಬಿದ್ದರು.

ಕಾಶ್ಗರ್ ಬಜಾರ್ನಲ್ಲಿ ಕೆಲಸ ಮಾಡಿದ ಕೇವಲ ಮೂರು ಉದ್ಯೋಗಿಗಳೊಂದಿಗೆ 2002 ರಲ್ಲಿ ಸಬ್ಯಸಾಚಿ ತನ್ನ ಮೊದಲ ಕಲೆಕ್ಷನ್ ಪ್ರಾರಂಭಿಸಿದರು. ಅವರ ತಾಯಿಯ ಕಲಾತ್ಮಕತೆಯಿಂದ ಸ್ಫೂರ್ತಿ ಪಡೆದ ಈ ಫ್ಯಾಷನ್ ಕಲೆಕ್ಷನಗ್ ಅನ್ನು ಪ್ರಸಿದ್ಧ ಲ್ಯಾಕ್ಮೆ ಫ್ಯಾಶನ್ ವೀಕ್ನಲ್ಲಿ ಪ್ರದರ್ಶಿಸಲಾಯಿತು. ಇದಕ್ಕೆ ವ್ಯಾಪಕವಾದ ಮೆಚ್ಚುಗೆ ಬಂತು.
ಈ ಯಶಸ್ಸು ಅವರ ಫ್ಯಾಷನ್ ಪ್ರಯಾಣದಲ್ಲಿ ದೊಡ್ಡದೊಂದು ಟ್ವಿಸ್ಟ್ ನೀಡಿತು. ಆದಾದ ನಂತರ ಅವರು ಸಿಂಗಾಪುರದಲ್ಲಿ ಮರ್ಸಿಡಿಸ್-ಬೆನ್ಜ್ ನ್ಯೂ ಏಷ್ಯಾ ಫ್ಯಾಶನ್ ವೀಕ್ನಲ್ಲಿ ತಮ್ಮ ಮೊದಲ ಗ್ರ್ಯಾಂಡ್ ವಿನ್ನರ್ ಪ್ರಶಸ್ತಿಯನ್ನು ಗೆದ್ದರು.
ಸಬ್ಯಸಾಚಿ ಲೇಬಲ್ ಭಾರತದಲ್ಲಿ ಅತ್ಯಂತ ಫೇಮಸ್ ಬ್ರ್ಯಾಂಡ್ ಬ್ರೈಡಲ್ ಡಿಸೈನರ್. ರಾಣಿ ಮುಖರ್ಜಿ ಸಬ್ಯಸಾಚಿ ಅವರ ಡಿಸೈನರ್ ಬ್ರೈಡಲ್ ಡ್ರೆಸ್ ಧರಿಸಿದ ಮೊದಲ ಬಾಲಿವುಡ್ ವಧು. ಆದಿತ್ಯ ಚೋಪ್ರಾ ಅವರೊಂದಿಗಿನ ಅವರ ರಹಸ್ಯ ವಿವಾಹದಲ್ಲಿ ಈ ಡಿಸೈನರ್ ಮಾತ್ರ ಅತಿಥಿಯಾಗಿದ್ದರು.
ಆ ನಂತರ ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ, ಮತ್ತು ಆಲಿಯಾ ಭಟ್ ಸೇರಿದಂತೆ ಅನೇಕ ನಟಿಯರು ತಮ್ಮ ಮದುವೆಗೆ ಸಬ್ಯಸಾಚಿಯ ಉಡುಗೆಯನ್ನೇ ಧರಿಸಿದ್ದಾರೆ.