ಸೈಂಟ್ ಮೇರಿಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಳಿಯೂರು ವರ್ಕಾಡಿ ಶಾಲೆಯ 25-2026 ರ ಸಾಲಿನ ಅಸೆಂಬ್ಲಿ ಚುನಾವಣೆ

Share with

ಸೈಂಟ್ ಮೇರಿಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಳಿಯೂರು ವರ್ಕಾಡಿ ಇದರ ಪ್ರಿನ್ಸಿಪಾಲ್ ಸಿಸ್ಟರ್ ಗ್ರೇಸಿ ಮಥಾಯಸ್ ಇವರ ನೇತೃತ್ವದಲ್ಲಿ 30/1/25 ರಂದು 25-2026 ರ ಸಾಲಿನ ಶಾಲೆಯ ಅಸೆಂಬ್ಲಿ ಚುನಾವಣೆ ನಡೆಯಿತು.


ಇ ವಿ ಯಂ ಮಾದರಿ ಮೆಷೀನ್ ನಲ್ಲಿ ನಡೆದ ಚುನಾವಣೆಯಲ್ಲಿ ಮಕ್ಕಳೆಲ್ಲ ಸಂತೋಷದಿಂದ ಮತ ಚಲಾಯಿಸಿದರು.ಶಾಲಾ ನಾಯಕಿಯಾಗಿ ಬಹುಮತದೊಂದಿಗೆ ಪೃಥ್ವಿ ಆಯ್ಕೆ ಯಾದರು.

ಫಾದರ್ ಅನಿಲ್ ಐವನ್ ಮಂಗಳೂರು ಇ ವಿ ಯಂ ಮೆಷೀನ್ ಬಗ್ಗೆ ಮಕ್ಕಳಿಗೆ ಸಂಪೂರ್ಣ ಮಾಹಿತಿ ನೀಡಿ ಟೆಕ್ನಿಕಲ್ ಸಪೋರ್ಟ್ ನೀಡಿದರೆ, ಅಧ್ಯಾಪಕಿ ಗೀತಪ್ರಿಯ ಚುನಾವಣೆ ಯನ್ನು ನಡೆಸಿಕೊಟ್ಟರು. ಆಫೀಸರ್ ಗಳಾಗಿ ಆದ್ಯಾಪಿಕೆಯರಾದ ಸಿಸ್ಟರ್ ವಿನ್ನಿ ಡಿ ಕೋಸ್ಟಾ, ಶಾರದಾ, ಶಾರಿಕ, ಶ್ವೇತ, ಸಿಸ್ಟರ್ ಸಿಲ್ವಿಯಾ,ರೇಣುಕಾ ಮತ್ತು ಅಧ್ಯಾಪಕರಾದ ಶಿವಪ್ರಸಾದ್ , ವಿಜೇಶ್ ಸಹಕರಿಸಿದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಶಾಲಾ ಪಿ ಟಿ ಯೆ ಉಪಾಧ್ಯಕ್ಷರಾದ ಮುಸ್ತಫಾ ಟಿ. ಎ ಭಾಗವಹಿಸಿದರು.


Share with