
ಭಾರತದ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ಕೇರಳದ ತಿರುವನಂತಪುರದಲ್ಲಿರುವ ಅನಂತ ಪದ್ಮನಾಭ ಸ್ವಾಮಿ ಕೂಡ ಒಂದು. ಈ ದೇಗುಲಕ್ಕೆ ಮಹಾ ಪ್ರಧಾನ ಅರ್ಚಕರಾಗಿ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ (45) ನೇಮಕಗೊಂಡಿದ್ದಾರೆ.
ಮಹಾಪ್ರಧಾನ ಅರ್ಚಕರೆಂದರೆ ಅವರಿಗೆ ಸಂಸ್ಥಾನದಿಂದ ನೀಡುವ ಕೊಡೆ (ಛತ್ರಿ) ಮರ್ಯಾದೆ ಇರುವ ವಿಶೇಷ ಸ್ಥಾನ. ಈ ಸ್ಥಾನವನ್ನು ಈವರೆಗೆ ಅತಿ ಸಣ್ಣ ವಯಸ್ಸಿನಲ್ಲಿ ಪಡೆದವರು ಇವರಾಗಿದ್ದಾರೆ. ಅರ್ಚಕರಾಗಿ ಸೇರಿದ ಆರೇ ತಿಂಗಳಲ್ಲಿ ಈ ಭಾಗ್ಯ ಲಭಿಸಿದೆ.
ಯಾವುದೇ ಕಾರಣಕ್ಕೂ ನಾವು ಶ್ರೀ ದೇವರೊಂದಿಗಿನ ನಂಬಿಕೆ ಕೈಬಿಡಬಾರದು. ದೇವರು ನಮಗೆ ಒಂದಲ್ಲೊಂದು ದಿನ ಒಲಿದೇ ಒಲಿಯುತ್ತಾರೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ನಾನೇ. ತಿರುವಾಂಕೂರ್ ಮಹಾರಾಜ ರಾಜವಂಶಜ ಕುಟುಂಬಕ್ಕೆ ನಾನು ಆಬಾರಿ. ಭಕ್ತರು ಒಮ್ಮೆಯಾದರೂ ತಿರುವನಂತಪುರದ ಶ್ರೀ ಅನಂತ ಪದ್ಮನಾಭ ಸ್ವಾಮಿಯ ದರ್ಶನವನ್ನು ಪಡೆಯಬೇಕು. ಇದು ನಮ್ಮ ಅಭಿವೃದ್ಧಿಗೆ ಕಾರಣವಾಗುತ್ತದೆ. ಅಧಿಕಾರವನ್ನು ವಹಿಸಿಕೊಂಡ ನಂತರದಲ್ಲಿ ಕರ್ನಾಟಕದ ಸರ್ವ ಜನರಿಗಾಗಿಯೂ ನಾನು ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಶ್ರೀಸತ್ಯನಾರಾಯಣ ತೋಡ್ತಿಲ್ಲಾಯ ಹೇಳಿದ್ದಾರೆ.