
ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸ ಹಲವರಿಗಿದೆ.
ಆದರೆ, ಖಾಲಿ ಹೊಟ್ಟೆಗೆ ಚಹಾ ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಚಹಾದಲ್ಲಿರುವ ಕೆಫೀನ್ ಹೊಟ್ಟೆಯ ಉರಿಯೂತ, ಆಸ್ತೀಯತೆ & ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.
ಎಚ್ಚರವಾದ 1-2 ಗಂಟೆಗಳ ನಂತರ ಚಹಾ ಕುಡಿಯುವುದು ಉತ್ತಮ ಎಂದು ತಜ್ಞರು ಸೂಚಿಸುತ್ತಾರೆ. ನೀವು ಚಹಾ ಕುಡಿಯುವ 1 ಗಂಟೆ ಮೊದಲು ಖಾಲಿ ಹೊಟ್ಟೆಗೆ ಉಗುರು ಬೆಚ್ಚಗಿನ ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ.