ಸಾಮಾನ್ಯವಾಗಿ ತರಕಾರಿ ಹಾಗೂ ವಸ್ತುಗಳ ಖರೀದಿಗೆ ಜನರು ಮುಗಿಬೀಳುವುದನ್ನು ನಾವು ನೋಡಿಯೇ ಇರ್ತೀವಿ. ಆದರೆ, ಮಾರುಕಟ್ಟೆಯೊಂದರಲ್ಲಿ ಜನರು ಜೀವಂತ ಕಪ್ಪೆಗಳ ಖರೀದಿಗೆ ಪೈಪೋಟಿ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ.
ಟಬ್‌ಗಳಲ್ಲಿ ಕಪ್ಪೆಗಳನ್ನು ಇಟ್ಟಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಎಲ್ಲಾ ಕಪ್ಪೆಗಳು ಜೀವಂತವಾಗಿವೆ ಮತ್ತು ಜಿಗಿಯುತ್ತವೆ. ಕಪ್ಪೆಗಳನ್ನು ಖರೀದಿಸಲು ಜನರು ಗುಂಪು ಗುಂಪಾಗಿ ಬರುತ್ತಿದ್ದಾರೆ.