ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕಾಂತಾರಾ-2 ಸಿನಿಮಾದ ಚಿತ್ರೀಕರಣ ದಸರಾ ಬಳಿಕ ಆರಂಭವಾಗುವ ಸಾಧ್ಯತೆಯಿದೆ. ಈ ಕುರಿತು ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿದ್ದು, ನಾನು ಹೊಸ ಸಿನಿಮಾಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ.
ಸ್ಕ್ರಿಪ್ಟ್ ಕೊನೆಯ ಹಂತದಲ್ಲಿದ್ದು, ಸದ್ಯದಲ್ಲೇ ಮುಹೂರ್ತದ ಬಗ್ಗೆ ನಿರ್ಮಾಣ ಸಂಸ್ಥೆಯಿಂದ ಮಾಹಿತಿ ಹೊರಬೀಳಲಿದೆ. ಮೊದಲ ಭಾಗಕ್ಕಿಂತಲೂ ಎರಡನೇ ಭಾಗ ದೊಡ್ಡದಾಗಿರುತ್ತದೆ. ನನ್ನ ಲುಕ್‌ನಲ್ಲೂ ಬದಲಾಗಲಿದೆ ಎಂದು ತಿಳಿಸಿದ್ದಾರೆ.