2023ರ ಮೇ ತಿಂಗಳಿನಲ್ಲಿ ನಡೆದ ಆನೆ ಗಣತಿ ಪ್ರಕಾರ ರಾಜ್ಯದ 6,395 ಆನೆಗಳಿವೆ. ಆನೆ ಗಣತಿ ವರದಿಯನ್ನು ಬಿಡುಗಡೆ ಮಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಆನೆಗಳ ಸಂಖ್ಯೆಯಲ್ಲಿ ರಾಜ್ಯ ದೇಶದಲ್ಲೇ ಅಗ್ರಸ್ಥಾನ ಪಡೆದಿದೆ ಎಂದು ತಿಳಿಸಿದರು.
2017ರಲ್ಲಿ ಗಣತಿ ಪ್ರಕಾರ ರಾಜ್ಯದಲ್ಲಿ 6,049 ಆನೆಗಳಿದ್ದವು. 6 ವರ್ಷಗಳ ಬಳಿಕ ಆನೆಗಳ ಸಂಖ್ಯೆಯಲ್ಲಿ ಶೇ.346ರಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ ಎಂದು ಹೇಳಿದರು. ಅಸ್ಸಾಂನಲ್ಲಿ 5,719, ಕೇರಳದಲ್ಲಿ 3,054 ಆನೆಗಳಿವೆ.