ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸದನದಲ್ಲಿ ಮಾತನಾಡುತ್ತಿದ್ದಾಗ ಸಂಸದರು ನಿರಂತರ ಘೋಷಣೆ ಕೂಗಿದ್ದು, ಇದರಿಂದ ಅವರು ತಾಳ್ಮೆ ಕಳೆದುಕೊಂಡರು.
‘ಪ್ರಧಾನಿ ಬರುವುದರಿಂದ ಏನಾಗಲಿದೆ? ಅವರೇನು ದೇವರೇ? ಇವರು ಯಾರೂ ದೇವರಲ್ಲ’ ಎಂದು ಖರ್ಗೆ ಕೋಪದಿಂದ ಹೇಳಿದರು. ಮಣಿಪುರದಲ್ಲಿ ಹಿಂಸಾಚಾರದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಪಕ್ಷಗಳು ತಂದಿರುವ ಅವಿಶ್ವಾಸ ನಿರ್ಣಯಕ್ಕೆ ಪ್ರಧಾನಿ ಮೋದಿ ಇಂದು ಉತ್ತರ ನೀಡಲಿದ್ದಾರೆ.