ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್ ಹಾಗೂ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ರಾಜ್ಯವನ್ನೂ ಕೇರಳಂ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರವನ್ನು ಕೋರಿ ಮಂಡಿಸಲಾದ ಮಸೂದೆಗೆ ಕೇರಳ ವಿಧಾನಸಭೆ ಸರ್ವಾನುಮತದ ಒಪ್ಪಿಗೆ ಸೂಚಿಸಿದೆ.
ವಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮಸೂದೆಗೆ ಯಾವುದೇ ತಿದ್ದುಪಡಿ ಹಾಗೂ ಮಾರ್ಪಾಡುಗಳನ್ನೂ ಸೂಚಿಸದ ಕಾರಣ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ನಿರ್ಣಯವನ್ನೂ ಮಂಡಿಸಿದ್ದಾರೆ. ನಿಲುವಳಿಗೆ ಸರ್ವಾನುಮತದ ಒಪ್ಪಿಗೆ ನೀಡಲಾಗಿದೆ ಎಂದು ಸಭಾಧ್ಯಕ್ಷ ಎ.ಎಂ. ಶಂಶೀರ್ ಘೋಷಿಸಿದ್ದಾರೆ.
ನಿರ್ಣಯಕ್ಕೆ ಸರ್ವಾನುಮತದ ಒಪ್ಪಿಗೆ
ನಿರ್ಭಾಣಯದ ಕುರಿತು ಮಾತನಾಡಿದ ಸಿಎಂ ಪಿಣರಾಯಿ ವಿಜಯನ್ ಭಾಷೆಯ ಆಧಾರದ ಮೇಲೆ ನವೆಂಬರ್ 1, 1956ರಂದು ರಾಜ್ಯಗಳನ್ನು ರಚಿಸಲಾಯಿತು. ಮಲಯಾಳಂ ಭಾಷಿಕರಿಗೆ ಅಖಂಡ ಕೇರಳವನ್ನು ಸ್ಥಾಪಿಸುವ ಅಗತ್ಯವು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಬಲವಾಗಿ ಹೊರಹೊಮ್ಮಿದೆ. ಆದರೆ, ಸಂವಿಧಾನದ ಮೊದಲ ವೇಳಾಪಟ್ಟಿಯಲ್ಲಿ ನಮ್ಮ ರಾಜ್ಯದ ಹೆಸರನ್ನೂ ಕೇರಳ ಎಂದು ಬರೆಯಲಾಗಿದೆ.
ಸಂವಿಧಾನದ ಮೂರನೇ ಪರಿಚ್ಛೇದದ ಅಡಿಯಲ್ಲಿ ರಾಜ್ಯದ ಹೆಸರನ್ನೂ ಕೇರಳಂ ಎಂದು ತಿದ್ದುಪಡಿ ಮಾಡುವಂತೆ ವಿಧಾನಸಭಯ ಮೂಲಕ ಸರ್ವಾನುಮತದಿಂದ ಕೇಂದ್ರ ಸರ್ಕಾರವನ್ನೂ ವಿನಂತಿಸುತ್ತದೆ. ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್ ಹಾಗೂ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ರಾಜ್ಯವನ್ನೂ ಕೇರಳಂ ಎಂದು ಮರುನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.