ಕಾಸರಗೋಡು: ಇಲ್ಲಿನ ಕಜೆ ಶ್ರೀ ಧೂಮವತಿ ದೈವಸ್ಥಾನದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ಸೀಯಾಳ ಅಭಿಷೇಕ, ಕ್ಷೀರಾಭಿಷೇಕ ಹಾಗೂ ನಾಗದೇವರಿಗೆ ಮಹಾಪೂಜೆ ಜರಗಿತು.
ನಾಳೆಯೂ (ಆ.22) ಬೆಳಿಗ್ಗೆ ನಡೆಯಲಿರುವ ತಂಬಿಲ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.