ಕಾಸರಗೋಡು: ಇಲ್ಲಿನ ಅನಂತಪುರ ಕಣ್ಣೂರು ಗ್ರಾಮದ ಕೋರಿತ್ತಲ ತರವಾಡಿನಲ್ಲಿ ಆ.21 ರಂದು ನಾಗರ ಪಂಚಮಿಯನ್ನು ಆಚರಿಸಲಾಯಿತು. ಕಣೂರು ತಂತ್ರಿ ಸದಾಶಿವ ತೇರುಕಂಜತ್ತಾಯರವರ ಪುತ್ರ ಶ್ರೀಹರಿ ಭಟ್ ವೈದಿಕ ವಿಧಿವಿಧಾನವನ್ನು ನೆರವೇರಿಸಿದರು. ಕುಟುಂಬದವರು ನಾಗ ದೇವರಿಗೆ ಹಾಲು ಹಾಗೂ ತಂಬಿಲ ಸೇವೆಯನ್ನು ಮಾಡಿಸಿ ದೇವರ ಕೃಪೆಗೆ ಪಾತ್ರರಾದರು. ಕುಟುಂಬದವರಾದ ಶಾಲಿನಿ ಶ್ರೀಕಾಂತ್ರವರು ಸೇವೆಯಾಗಿ ಬೆಳಗ್ಗಿನ ಉಪಾಹಾರವನ್ನು ನೀಡಿದರು.
ಬಳಿಕವಿಶೇಷ ಸಭೆಯಲ್ಲಿ ಹೊಸದಾಗಿ ಪಂಜುರ್ಲಿ ದೈವದ ಭಂಡಾರವನ್ನು ತರವಾಡು ಮನೆಯಲ್ಲಿ ಸ್ಥಾಪಿಸುವುದಾಗಿ ಮಾಡುವುದಾಗಿ ನಿರ್ಧಾರ ಮಾಡಲಾಯಿತು. ನಿರ್ಮಾಣಕ್ಕೆ ಬೇಕಾಗುವ ಖರ್ಚು-ವೆಚ್ಚವನ್ನು ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ತರವಾಡು ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕುಟುಂಬದವರು ಭಾಗಿಯಾಗಿದ್ದರು.