ಮಂಗಳೂರು: ನಿಷೇಧಿತ ಇ- ಸಿಗರೇಟ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯದ ಯುವತಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಲಾಲ್ಬಾಗ್ ಬಳಿಯ ಸಾಯಿಬಿನ್ ಕಾಂಪ್ಲೆಕ್ಸ್ನ ನೆಲಮಹಡಿಯಲ್ಲಿರುವ ಆಮಂತ್ರಣ, ಯೂನಿಕ್ ವರ್ಲ್ಡ್ ಮತ್ತು ಫೆಂಟಾಸ್ಟಿಕ್ ವರ್ಲ್ಡ್ ಅಂಗಡಿಗಳ ಮೇಲೆ ಬರ್ಕೆ ಪೊಲೀಸರು ಸೋಮವಾರ ದಾಳಿ ನಡೆಸಿದ್ದರು.
ಈ ವೇಳೆ ನಿಷೇಧಿತ ಇ-ಸಿಗರೇಟ್ ಮತ್ತು ಪ್ಯಾಕೆಟ್ ಮೇಲೆ ಎಚ್ಚರಿಕೆ ನಮೂದಿಸದ ವಿದೇಶಿ ಸಿಗರೇಟ್ ಸೇರಿದಂತೆ ಒಟ್ಟು ಅಂದಾಜು 2.70 ಲ.ರೂ.ಮೌಲ್ಯದ ಸಿಗರೇಟ್ಗಳನ್ನು ವಶಕ್ಕೆ ಪಡೆದು ನಾಲ್ವರನ್ನು ಬಂಧಿಸಿದ್ದಾರೆ. ಸುಳ್ಯ ನೆಲ್ಲೂರು ಕೆಮ್ರಾಜೆ ನಿವಾಸಿ ಸ್ವಾತಿ (26), ಮಣ್ಣಗುಡ್ಡೆಯ ಶಿವಕುಮಾರ್ (34), ಕುತ್ತಾರ ಪದವಿನ ಹಸನ್ ಶರೀಫ್ (50) ಮತ್ತು ರೆಹಮತುಲ್ಲಾ (45) ಬಂಧಿತ ಆರೋಪಿಗಳು. ಬಂಧಿತರಲ್ಲಿ ಇಬ್ಬರಿಗೆ ಜಾಮೀನು ದೊರೆತಿದ್ದು, ಮತ್ತಿಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.