ರಷ್ಯಾ ಅಧ್ಯಕ್ಷ ಪುಟಿನ್ ಅವರು ಪ್ರಧಾನಿ ಮೋದಿ ಜತೆ ದೂರವಾಣಿಯಲ್ಲಿ ಮಾತನಾಡಿದ್ದು, ಮುಂದಿನ ತಿಂಗಳು ಹೊಸದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಅವರ ಬದಲಿಗೆ ವಿದೇಶಾಂಗ ಸಚಿವ ಲಾವ್ರೋವ್ ದಿಲ್ಲಿಗೆ ಬರಲಿದ್ದಾರೆ. ಕ್ರಿಮಿನಲ್ ಯುದ್ಧದ ಹಿನ್ನಲೆ ಪುಟಿನ್ ವಿರುದ್ಧ ವಾರಂಟ್ ಇದೆ. ಈ ಸಂಬಂಧ ಎಲ್ಲಾ ದೇಶಗಳ ನಡುವೆ ಒಪ್ಪಂದವಿದ್ದು, ಅದರಂತೆ ಪುಟಿನ್ ಭಾರತಕ್ಕೆ ಬಂದರೆ, ಭಾರತ ಸರ್ಕಾರವು ಅವರನ್ನು ಬಲವಂತವಾಗಿ ಬಂಧಿಸಬೇಕಾಗುತ್ತದೆ.