ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್(ರಿ) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಆ.30 ರಂದು IQAC ಮತ್ತು ಸಾಂಸ್ಕೃತಿಕ ಸಂಘದ ಜಂಟಿ ಆಶ್ರಯದಲ್ಲಿ ಓಣಂ ‘ಶ್ರಾವಣೋತ್ಸವ’ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್ ಇದರ ಸ್ಥಾಪಕಾಧ್ಯಕ್ಷ ಶ್ರೀಗೋಕುಲ್‌ನಾಥ್ ಪಿ.ವಿ. ದೀಪಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿ ಎಲ್ಲಾ ಹಬ್ಬಗಳನ್ನು ಆಚರಿಸುವ ಮೂಲಕ ವಿದ್ಯಾಸಂಸ್ಥೆಯಲ್ಲಿ ಆಚರಿಸಿ ಸೌಹಾರ್ಧತೆಯ ಸಂದೇಶವನ್ನು ಸಾರಬಹುದು. ವೃತ್ತಿಪರ ಕೋರ್ಸ್‌ಗಳ ಕನಸುಗಳನ್ನು ಹೊತ್ತ ವಿದ್ಯಾರ್ಥಿಗಳಿಗೆ ಈ ಸಂಸ್ಥೆ ಆಶಾಕಿರಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ವಹಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಜಯಕುಮಾರ್ ಆರ್ ನಾಯಕ್, ಕಾಲೇಜಿನ ಆಡಳಿತ ನಿದೇಶಕಿ ಕಲಾವತಿ ನಡುಬೈಲು, ಪ್ರಾಂಶುಪಾಲರಾದ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ ಉಪಸ್ಥಿತರಿದ್ದರು.
ವಿದ್ಯಾರ್ಥಿ ಪ್ರಕೃತಿ ಪ್ರಾರ್ಥಿಸಿ, ಉಪನ್ಯಾಸಕಿ ರಶ್ಮಿ ಕೆ ಇವರು ಸ್ವಾಗತಿಸಿ, ಉಪನ್ಯಾಸಕರಾದ ರೋಶನ್ ಅಂಟೋನಿ ವಂದಿಸಿದರು. ಉಪನ್ಯಾಸಕ ರಾಕೇಶ್ ಕುಲದಪಾರೆ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಮೆರಗು:
ಕೇರಳದ ವಿವಿಧ ಬಗೆಯ ನೃತ್ಯ ರೂಪಕಗಳು ವಿದ್ಯಾರ್ಥಿಗಳಿಂದ ಮೂಡಿಬಂದವು.
ಕಾರ್ಯಕ್ರಮದ ನಂತರ ಕೇರಳದ ಓಣಂ ‘ಸದ್ಯ’ ಏರ್ಪಡಿಸಿದ್ದು, ಎಲ್ಲಾ ವಿದ್ಯಾರ್ಥಿಗಳು, ನೆಲದಲ್ಲಿ ಕುಳಿದು ಬಾಳೆಯಲ್ಲಿ ಓಣಂ ‘ಸದ್ಯವನ್ನು ಸವಿದರು.
ಕಲಾರೂಪದೊಂದಿಗೆ ಆಕರ್ಷಣೀಯ ಮೆರವಣಿಗೆ:
ಅಕ್ಷಯ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ಅಕ್ಷಯ ಕಾಲೇಜಿನಿಂದ ಸಂಪ್ಯ ಪೊಲೀಸ್ ಸ್ಟೇಷನ್‌ವರೆಗೆ ಕೇರಳ ಶೈಲಿಯ ಉಡುಗೆಯಲ್ಲಿ ಚೆಂಡೆ- ಸಿಂಗಾರಿ ಮೇಳದೊಂದಿಗೆ ವೈಭವೇತವಾಗಿ ಮೆರವಣಿಗೆ ನಡೆಯಿತು.
ವಾಮನ ಮತ್ತು ಮಹಾಬಲಿ ಚಕ್ರವರ್ತಿ, ಮೋಹಿಣಿಯಾಟ್ಟಂ ಮೊದಲಾದ ಕಲಾರೂಪದೊಂದಿಗೆ ಆಕರ್ಷಣೀಯ ಮೆರವಣಿಗೆ ನಡೆಯಿತು.