ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಹೊಟೇಲ್ ಮೋತಿ ಮಹಲ್‌ನ ಈಜುಕೊಳದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಕೇರಳದ ತಿರುವನಂತಪುರಂ ನಿವಾಸಿ ಹಾಗೂ ಯುನಿಯನ್ ಬ್ಯಾಂಕ್ ಅಧಿಕಾರಿಯಾಗಿರುವ ಗೋಪು ಆರ್ ನಾಯರ್ ಎಂದು ಗುರುತಿಸಲಾಗಿದೆ.
ಇವರು ಸೆ.10 ರಂದು ಮೋತಿಮಹಲ್ ಹೋಟೆಲ್‌ನಲ್ಲಿ ತಂಗಿಕೊಂಡಿದ್ದು, ಇಂದು ಬೆಳಗ್ಗೆ ಸರಿಸುಮಾರು 4 ಗಂಟೆಗೆ ಕೊಠಡಿಯಿಂದ ಹೊರ ಹೋಗಿದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪಾಂಡೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.