ಮುಂಬೈ: ಬಾಲಿವುಡ್ ಹಿರಿಯ ನಟ ರಿಯೋ ಕಪಾಡಿಯಾ ಸೆ.14ರಂದು ಮುಂಬೈಯಲ್ಲಿ ಮೃತಪಟ್ಟಿದ್ದಾರೆ. 66 ವರ್ಷದ ರಿಯೋ ಕಪಾಡಿಯಾ, ‘ಚಕ್ ದೇ ಇಂಡಿಯಾ’, ‘ದಿಲ್ ಚಾಹ್ತಾ ಹೈ’, ‘ಹ್ಯಾಪಿ ನ್ಯೂ ಇಯರ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಪತ್ನಿ ಮರಿಯಾ ಮತ್ತು ಮಗಳು ಫರಾ ಅವರನ್ನು ಅಗಲಿದ್ದಾರೆ.
ಶಾರುಖ್ ಖಾನ್ ಅವರ ‘ಚಕ್ ದೇ ಇಂಡಿಯಾ’ ಚಿತ್ರದಲ್ಲಿ ಕಾಮೆಂಟೇಟರ್ ಆಗಿ ಹೆಸರು ಪಡೆದಿದ್ದರು. ಇವರ ಅಂತ್ಯಕ್ರಿಯೆ ನಾಳೆ(ಸೆ. 15) ಜರುಗಲಿದೆ ಎಂದು ತಿಳಿದು ಬಂದಿದೆ.