ಸೀತಾಂಗೋಳಿ : ಶ್ರೀವಿಶ್ವಕರ್ಮ ಕಬ್ಬಿಣ ಕರಕುಶಲ ಸಂಘ ಕಾಸರಗೋಡು ಇದರ ಆಶ್ರಯದಲ್ಲಿ 5ನೇ ವಾರ್ಷಿಕೋತ್ಸವ ಹಾಗೂ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮ ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದಲ್ಲಿ ಸೆ.17 ರಂದು ಜರಗಿತು. ಇದರ ಅಂಗವಾಗಿ ಬೆಳಗ್ಗೆ ಪುರೋಹಿತ ಕುಂಬಳೆ ಜನಾರ್ಧನ ಆಚಾರ್ಯ ರ ಪೌರೋಹಿತ್ಯದಲ್ಲಿ ವಿಶ್ವಕರ್ಮ ಪೂಜೆ ಹಾಗೂ ಶ್ರೀದುರ್ಗಾಪರಮೇಶ್ವರಿ ಭಜನಾ ಸಂಘ ದೈಹಿತ್ಲು ಪಡ್ರೆ ಅವರಿಂದ ಭಜನಾ ಸೇವೆ ಜರಗಿತು. ಬಳಿಕ ಸಂಘಟನೆಯ ಅಧ್ಯಕ್ಷ ಕೇಶವ ಆಚಾರ್ಯ ವಾಣಿನಗರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ಗೋಪಾಣ್ಣ ಆಚಾರ್ಯ ಮೌವ್ವಾರು ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ವ್ಯವಸಾಯಿ ಕೇಂದ್ರದ ಕೋರ್ಡಿನೇಟರ್ ಅರುಣ್ ವಿಶ್ವಕರ್ಮ ಸಮುದಾಯದ ವ್ಯವಹಾರೋದ್ಯಮಗಳಿಗೆ ಸಿಗುವ ಸವಲತ್ತು ಹಾಗೂ ಅದರ ಬಳಕೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಕೆ.ಪಿ.ಆನಿಲ್ ಕುಮಾರ್,ಪುತ್ತಿಗೆ ಗ್ರಾ.ಪಂ.ಸದಸ್ಯೆ ಕಾವ್ಯಶ್ರೀ, ಪತ್ರಕರ್ತ ಜಯ ಮಣಿಯಂಪಾರೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಈ ಸಂದರ್ಭದಲ್ಲಿ
ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ವಿಜೇತ ತೇಜಸ್ ಆಚಾರ್ಯ ,ದ್ವಿತೀಯ ರಾಂಕ್ ಗಳಿಸಿದ ಧನ್ಯಶ್ರೀ ಆಚಾರ್ಯ, ಕೇರಳ ಶಾಲಾ ಕಲೋತ್ಸವದಲ್ಲಿ ರಾಜ್ಯ ಮಟ್ಟದ ತಬಲ ವಾದನದಲ್ಲಿ ಎ ಗ್ರೇಡ್ ಗಳಿಸಿದ ಪ್ರಜ್ವಲ್ ಎಸ್.ಕೆ.ಆಚಾರ್ಯ, ಚಿತ್ರಕಲೆಯಲ್ಲಿ ಎಗ್ರೆಡ್ ಗಳಿಸಿದ ಶ್ರಾವಣ್ ಕುಮಾರ್, ಭರತನಾಟ್ಯ ಜ್ಯೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಎಗ್ರೆಡ್ ಗಳಿಸಿದ ಪ್ರತಿಭಾ ಎಸ್.ಕೆ, ಎಸ್ಸಸ್ಸೆಲ್ಸಿ ಪರೀಕ್ಷೆಯಲ್ಲಿ 98% ಅಂಕ ಗಳಿಸಿದ ಪ್ರಮೋದ್ ರಾಜ್ ಎಸ್.ಕೆ.ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ರವೀಂದ್ರ ಆಚಾರ್ಯ ಮುಳ್ಳೇರಿಯ ಸ್ವಾಗತಿಸಿ ಕಾರ್ಯದರ್ಶಿ ಚಂದ್ರಶೇಖರ ಆಚಾರ್ಯ ಬಜಕೂಡ್ಲು ವಂದಿಸಿದರು.
ಬಳಿಕ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಾ ಸಂಘ ಅಡೂರು ಕುರ್ನೂರು ಅವರಿಂದ ಇಂದ್ರಜಿತು ಕಾಳಗ ಎಂಬ ಯಕ್ಷಗಾನ ತಾಳಮದ್ದಲೆ ಜರಗಿತು.