ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಬಸ್ ನಿಲ್ದಾಣ ಬಳಿ ಕಾರು-ಬೈಕ್ ಅಪಘಾತದ ವಿಷಯದಲ್ಲಿ ಗಲಾಟೆ ನಡೆದಿರುವ ಬಗ್ಗೆ ವರದಿಯಾಗಿದೆ.
ಕಾರು-ಬೈಕ್ ಡಿಕ್ಕಿ ವಿಚಾರದಲ್ಲಿ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಲಾಗಿದ್ದು, ಇದನ್ನು ಅಡ್ಡಿಪಡಿಸಿದ ಸಾರ್ವಜನಿಕರ ಮೇಲೂ ಯುವಕರು ಹಲ್ಲೆ ನಡೆಸಿದ್ದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಯುವಕರಿಗೆ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಹಲ್ಲೆಗೊಳಗಾದ ಬೈಕ್ ಸವಾರ ಪಶ್ಚಿಮ ಬಂಗಾಳ ಮೂಲದ ನಿವಾಸಿಯಾಗಿದ್ದು, ಉಜಿರೆಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಇನ್ನು ಪರಿಸ್ಥಿತಿಯನ್ನು ನಿಯಂತ್ರಿಸಿ ಕಾರಿನಲ್ಲಿದ್ದವರನ್ನು ಬೆಳ್ತಂಗಡಿ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಠಾಣೆಯಲ್ಲಿ ಬೈಕ್ ಸವಾರ ಮತ್ತು ಕಾರಿನಲ್ಲಿದ್ದ ಮೂವರು ಯುವಕರು ರಾಜಿಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.