ಮಂಗಳೂರು: ಮೀನುಗಾರಿಕಾ ಇಲಾಖೆಯ ಸಹಯೋಗದಲ್ಲಿ ಮಂಗಳೂರಿನ ಕಡಲ ಪ್ರದೇಶದಲ್ಲಿ ಸಿಲುಕಿದ್ದ 10 ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರ್ಚೆಂದೂರ್ ಮುರುಗನ್ ಬೋಟ್ ನಲ್ಲಿದ್ದ 10 ಮೀನುಗಾರರು ಸೆ.20 ರಂದು ಕಡಲ ಪ್ರದೇಶದಲ್ಲಿ ಪ್ರಯಾಣ ಆರಂಭಿಸಿದ್ದರು. ಆದರೆ ಸೆ.24 ರಂದು ಇಂಜಿನ್ ಶಾಫ್ಟ್ ಸಮಸ್ಯೆಯ ಪರಿಣಾಮ 39 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿ ಮೀನುಗಾರರು ಸಿಲುಕಿದ್ದರು.
ಭಾರತೀಯ ಕೋಸ್ಟ್ ಗಾರ್ಡ್ ಪರಿಸ್ಥಿತಿಯ ತುರ್ತುಸ್ಥಿತಿಯನ್ನು ಗುರುತಿಸಿ, ತಕ್ಷಣವೇ ಕಾರ್ಯಪ್ರವೃತ್ತವಾಗಿದೆ ಮತ್ತು ಸಿಲುಕಿದ್ದ ಮೀನುಗಾರಿಕಾ ದೋಣಿಗೆ ಸಹಾಯ ಮಾಡಲು ಕೋಸ್ಟ್ ಗಾರ್ಡ್ ಹಡಗುಗಳಾದ C-448 ಮತ್ತು C-446 ಅನ್ನು ನಿಯೋಜಿಸಿ, ಮೀನುಗಾರರನ್ನು ರಕ್ಷಿಸಲಾಗಿದೆ.