ಪುತ್ತೂರು: ಬನ್ನೂರು ಕೃಷ್ಣನಗರ ಸಮೀಪದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆ.29ರಂದು “ಯೋಗ ಶಿಕ್ಷಣ ಕಾರ್ಯಗಾರ” ನಡೆಯಿತು. ಸಂವಿತ್ ಸಂಶೋಧನಾ ಕೇಂದ್ರದ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಂದ್ರಶೇಖರ ದೇಲಂಪಾಡಿ ಅವರು ಎವಿಜಿ ಶಾಲಾ ಶಿಕ್ಷಕರಿಗೆ ಯೋಗ ಶಿಕ್ಷಣದ ಕಾರ್ಯಗಾರ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಸಭಾಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಂಚಾಲಕ ಎ.ವಿ. ನಾರಾಯಣ, ಸಂಸ್ಥೆಯ ಸಹಾಯಕರಾದ ನಾರಾಯಣ ಕುಲಾಲ್, ಭುವನೇಶ್ವರಿ ಭಾಗವಹಿಸಿದ್ದರು. ಪ್ರಾಂಶುಪಾಲೆ ಉಷಾ ಕಿರಣ ಕೆ.ಯಸ್ ಸ್ವಾಗತಿಸಿದರು, ಸಂಸ್ಥೆಯ ಶಿಕ್ಷಕಿ ಯಶುಭ ವಂದಿಸಿದರು, ವನಿತಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.