ವಿಟ್ಲ: ವಿಟ್ಲದ ಬೊಬ್ಬೆಕೇರಿಯ ಕಾವೇರಿ ಬಾರ್, ಮೇಗಿನ ಪೇಟೆಯ ಬಿಗ್ ಬೇಕ್ಸ್ ಬೇಕರಿ ಹಾಗೂ ಮಂಗಳಪದವಿನ ಅಂಗಡಿಯಲ್ಲಿ ಕಳ್ಳತನ ನಡೆದ ಘಟನೆ ಬೆಳಕಿಗೆ ಬಂದಿದೆ.
ಕಳ್ಳರು ಕಾವೇರಿ ಬಾರ್ನಲ್ಲಿ ಸುಮಾರು 40,000 ರೂಪಾಯಿ ನಗದು, ಸ್ಪೀಕರ್ ಮತ್ತು ಮದ್ಯದ ಕೆಲವು ಬಾಟಲ್ಗಳನ್ನು ಕೊಂಡೊಯ್ದು, ಕೆಲವು ಮದ್ಯದ ಬಾಟಲಿಗಳನ್ನು ಹೊರಗೆ ಇಟ್ಟು ತೆರಳಿದ್ದಾರೆ.
ಮೇಗಿನ ಪೇಟೆಯ ಬಿಗ್ ಬೇಕ್ಸ್ ಬೇಕರಿಯಲ್ಲಿ ಹರಕೆ ಡಬ್ಬಿ, ಚಾಕಲೇಟ್, ಮೊಬೈಲ್, ನಗದು ದೋಚಿದ್ದಾರೆ ಎಂದು ತಿಳಿದು ಬಂದಿದೆ.