ಕಾಸರಗೋಡು: ಕಾಸರಗೋಡು ಮಲ್ಲದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಅಕ್ಟೋಬರ್ 15ರಿಂದ 24ರವರೆಗೆ ನವರಾತ್ರಿ ಮಹೋತ್ಸವ ನಡೆಯಲಿದೆ.
ಪ್ರತಿ ನಿತ್ಯ ಬೆಳಿಗ್ಗೆ ಅಭಿಷೇಕ, ಅರ್ಚನೆ, ಉಷಃ ಪೂಜೆ, ನವಕಾಭಿಷೇಕ ಮತ್ತು ತುಲಾಭಾರ ನಡೆಯಲಿದ್ದು ಮಧ್ಯಾಹ್ನ ಪೂಜೆ ಸಾಯಂಕಾಲ ದೀಪಾರಾಧನೆ, ಅರ್ಚನೆ, ನವರಾತ್ರಿ ಪೂಜೆ, ರಾತ್ರಿ ಪೂಜೆ ನಡೆಯಲಿದೆ. ಅ.15ರಂದು ನವರಾತ್ರಿ ಪ್ರಾರಂಭ, ಅ.20ರಂದು ಶಾರದಾ ಪೂಜೆ ಪ್ರಾರಂಭ, ಅ. 22ರಂದು ದುರ್ಗಾಷ್ಟಮಿ, ಅ.23ರಂದು ಮಹಾನವಮಿ, ಚಂಡಿಕಾ ಹೋಮ, ವಾಹನ ಪೂಜೆ, ಅ.24ರಂದು ವಿಜಯ ದಶಮಿ, ವಿದ್ಯಾರಂಭ ಹಾಗೂ ಶಮಿ ಪೂಜೆ ನಡೆಯಲಿದೆ.
ವಿಶೇಷ ಸೇವೆಗಳಾಗಿ ಅ.15ರಿಂದ 22ರವರೆಗೆ ತುಲಾಭಾರ, ಅ.20ರಿಂದ 24ರವರೆಗೆ ಸರಸ್ವತಿ ಪೂಜೆ ಮತ್ತು ಅ.23ರಂದು ವಾಹನ ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.