ಕಡಬ: ಕಡಬ ತಾಲೂಕಿನ ಐತೂರು, ಕೊಣಾಜೆ, ಕೊಂಬಾರು, ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿಯಿಂದ ಸಮಸ್ಯೆ ಉಂಟಾಗಿದ್ದು, ಅದರಿಂದ ಕಾಡಾನೆಗಳನ್ನು ಆನೆ ಶಿಬಿರಗಳಿಗೆ ಸ್ಥಳಾಂತರಿಸಬೇಕಾಗಿ ಮತ್ತು ಹಾನಿಯನ್ನು ತಪ್ಪಿಸಲು ಆನೆ ಕಂದಕ, ಸೋಲಾರ್ ಬೇಲಿ ಮತ್ತು ಸೋಲಾರ್ ಬೀದಿ ದೀಪ ಸಂರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಮಾನ್ಯ ಅರಣ್ಯ ಜೀವಿ ಪರಿಸ್ಥಿತಿ ಹಾಗೂ ಪರಿಸರ ಸಚಿವರಾದ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದು, ಮನವಿಯನ್ನು ಪರಿಶೀಲಿಸಿದ ಸಚಿವರು ಸೂಕ್ತ ಕ್ರಮ ಕೈಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.