ನವದೆಹಲಿ: ಫಿಸಿಕ್ಸ್‌ವಾಲಾ ಶಿಕ್ಷಕರೊಬ್ಬರು ಲೈವ್-ಸ್ಟ್ರೀಮಿಂಗ್ ತರಗತಿ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಚಪ್ಪಲಿಯಿಂದ ಥಳಿಸಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋಚಿಂಗ್ ಕ್ಲಾಸ್ ಲೈವ್ ಇದ್ದಾಗಲೇ ಏಕಾಏಕಿ ವಿದ್ಯಾರ್ಥಿಯೊಬ್ಬ ಬಂದು ಶಿಕ್ಷಕನಿಗೆ ಚಪ್ಪಲಿಯಿಂದ ಹೊಡೆಯುವ ಚಿತ್ರಣ ವಿಡಿಯೋದಲ್ಲಿದ್ದು, ಏಟು ತಿಂದ ಶಿಕ್ಷಕ ದೂರ ಸರಿದಿರುವುದು ಸೆರೆಯಾಗಿದೆ. ವಿದ್ಯಾರ್ಥಿ ಯಾವ ಕಾರಣಕ್ಕಾಗಿ ಶಿಕ್ಷಕನಿಗೆ ಹೊಡೆದಿದ್ದಾನೆ ಎಂಬುದು ತಿಳಿದು ಬಂದಿಲ್ಲ ಎಂದು ವರದಿ ವಿವರಿಸಿದೆ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.