ಬೆಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಂಬಳ ಸಮಿತಿ(ರಿ), ತುಳು ಕೂಟ ಬೆಂಗಳೂರು, ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಸರ್ವ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ, ಬೆಂಗಳೂರು ಕಂಬಳ ಸಮಿತಿ ಅರ್ಪಿಸುವ ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಇದರ ಮಹತ್ವದ ಸಭೆ ಅ.6ರಂದು ಬೆಂಗಳೂರಿನ ರಾಜಾಜಿನಗರದ ಕದಂಬ ವೆಜ್ ಬೆಂಗಳೂರಿನಲ್ಲಿ ನಡೆಯಿತು.
ಕಂಬಳ ನಮ್ಮ ಕಂಬಳ ಸಮಿತಿಯ ಅಧ್ಯಕ್ಷರಾದ, ಅಶೋಕ್ ಕುಮಾರ್ ರೈರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಿತಿಯ ಪ್ರಮುಖರಾದ ಉದ್ಯಮಿ ಗುಣರಂಜನ್ ಶೆಟ್ಟಿ, ಗುರುಕಿರಣ್ ಮತ್ತು ಬಂಟರ ಸಂಘ ಬೆಂಗಳೂರು ಇದರ ಅಧ್ಯಕ್ಷ ಮುರಳಿದರ ಹೆಗ್ಡೆ, ಮಾಜಿನಗರ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ, ರಾಜೇಂದ್ರ ಕುಮಾರ್, ಹೋಟೆಲ್ ಮಾಲಕರ ಅಧ್ಯಕ್ಷ ಬಿ.ಸಿ.ರಾವ್, ಮೊದಲಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ವಿವಿಧ ಸಹಸಮಿತಿಗಳನ್ನು ರಚಿಸಲಾಯಿತು. ಅಶೋಕ್ ರೈ, ಗುಣರಂಜನ್ ಶೆಟ್ಟಿ, ಗುರುಕಿರಣ್, ಅವರನ್ನು ಬೆಂಗಳೂರು ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.