ವಿಟ್ಲ: ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಪುಣಚದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬೈಲುಪಾದೆ ಲಿಯೋ ಡಿಸೋಜರವರ ಮಗ ರಿತೇಶ್ ಡಿಸೋಜ (31 ವ.) ಮೃತಪಟ್ಟ ಯುವಕನಾಗಿದ್ದು, ಅವಿವಾಹಿತರಾಗಿದ್ದ ರಿತೇಶ್ ಡಿಸೋಜರವರಿಗೆ ಸೆ.30ರಂದು ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದರಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಮದ್ದು ಮಾಡಿದ್ದರು. ಆದರೂ ಜ್ವರ ಕಡಿಮೆಯಾಗದೆ ಅ.4ರಂದು ತೀವ್ರ ಜ್ವರ ಉಲ್ಬಣಗೊಂಡಿದ್ದರಿಂದ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ರಿತೇಶ್ ಡಿಸೋಜರವರು ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಮೃತರ ತಂದೆ ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.