ಮಂಗಳ ವಾರಪತ್ರಿಕೆ ಇನ್ನು ಮನೆಗೆ ಬರುವುದಿಲ್ಲ: ಪ್ರಕಟಣೆ ಸ್ಥಗಿತ

Share with

ಮಂಗಳ ವಾರಪತ್ರಿಕೆಯು ಈ ವಾರದ ಸಂಚಿಕೆಯೊಂದಿಗೆ ತನ್ನ ಪ್ರಕಟಣೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಬೆಂಗಳೂರು: ಓದುಗರ ಮನಸಲ್ಲಿ ಸ್ಥಾನಗಳಿಸಿದ್ದ ಮಂಗಳ ವಾರಪತ್ರಿಕೆಯು ಈ ವಾರದ ಸಂಚಿಕೆಯೊಂದಿಗೆ ತನ್ನ ಪ್ರಕಟಣೆ ಸ್ಥಗಿತಗೊಳಿಸಲು ನಿರ್ಧರಿಸಿದೆ

ಮುದ್ರಣ ವೆಚ್ಚ ವಿಪರೀತ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಪತ್ರಿಕೆಯನ್ನು ನಡೆಸಿಕೊಂಡು ಹೋಗುವುದು ತ್ರಾಸದಾಯಕವಾಗಿರುವುದರಿಂದ ಈ ಸಂಚಿಕೆಯೊಂದಿಗೆ ʻಮಂಗಳʼದ ಪ್ರಕಟಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ. ಮುಂದಿನ ಸಂಚಿಕೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಒಂದಕ್ಕಿಂತ ಒಂದು ಭಿನ್ನವಾದ ರೀತಿಯಲ್ಲಿ ಪ್ರಕಟಣೆಯಾಗುತ್ತಿರುವ ವೈವಿಧ್ಯಮಯ ಕಾದಂಬರಿಗಳು ಓದುಗರ ಮನಸೂರೆಗೊಳ್ಳುತ್ತಿದ್ದವು. ಒಬ್ಬರಿಗಿಂತ ಒಬ್ಬರು ಜನಪ್ರಿಯ ಕಾದಂಬರಿಕಾರರ ಕಾದಂಬರಿಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.

ಆರಂಭಿಕ ಸಂಪಾದಕರಾದ ಬಾಬು ಕೃಷ್ಣಮೂರ್ತಿಯವರು, ಅವರ ನಂತರ ಸಂಪಾದಕರಾದ, ಬಿ.ಎಂ.ಮಾಣಿಯಾಟ್, ಎನ್.ಎಸ್.ಶ್ರೀಧರ್ಮೂರ್ತಿ, ಎನ್ನೇಬಿ ಮೊಗ್ರಾಲ್ ಪುತ್ತೂರು ಓದುಗರ ಅಭಿರುಚಿಗೆ ತಕ್ಕಂತೆ ಕಾದಂಬರಿಗಳನ್ನು ಆಯ್ಕೆ ಮಾಡಿಕೊಂಡು ಮಂಗಳಕ್ಕೆ ವಿಶೇಷ ಸ್ಥಾನಮಾನವನ್ನು ತಂದು ಕೊಟ್ಟಿದ್ದರು.

ಅಂಥ ವಾರಪತ್ರಿಕೆ ತನ್ನ ಪ್ರಕಟಣೆಯನ್ನು ನಿಲ್ಲಿಸುತ್ತಿದೆ ಎಂದು ಪ್ರಕಟಿಸುತ್ತಿದ್ದಂತೆಯೇ ಆ ಪತ್ರಿಕೆಯ ಜತೆ ಒಡನಾಟ ಹೊಂದಿದ್ದ ನೂರಾರು ಬರಹಗಾರರಿಗೆ ಹಾಗೂ ಓದುಗಾರರಿಗೆ ತುಂಬ ನೋವಿನ ಸಂಗತಿಯಾಗಿದೆ.


Share with

Leave a Reply

Your email address will not be published. Required fields are marked *