ಹಳೆಯಂಗಡಿ: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾನುವಾರ ಹಲವರಿಗೆ ಹುಚ್ಚು ನಾಯಿ ಕಡಿದ ಘಟನೆ ನಡೆದಿದೆ.
ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಪಾದಾಚಾರಿಗಳ ಸಹಿತ ದ್ವಿಚಕ್ರ ವಾಹನ ಸವಾರರಿಗೆ ಹುಚ್ಚು ನಾಯಿ ಕಡಿದಿದ್ದು ಹುಚ್ಚು ನಾಯಿ ಹಾಗೂ ಬೀದಿ ನಾಯಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಗ್ರಾಮ ಪಂಚಾಯತ್ ಗೆ ಆಗ್ರಹಿಸಿದ್ದಾರೆ. ತಿಂಗಳ ಹಿಂದೆ ಹಳೆಯಂಗಡಿ ಗ್ರಾಮ ಪಂಚಾಯತ್ ಇದರ ಬಗ್ಗೆ ಉಲ್ಲೇಖಿಸಿ ಬೀದಿ ನಾಯಿ ಹಾಗೂ ಹುಚ್ಚು ನಾಯಿಗಳ ಎಚ್ಚರಿಕೆಯ ಫಲಕವನ್ನು ಅಲ್ಲಲ್ಲಿ ಪ್ರಕಟಿಸಿತ್ತು.
ಕೊಳುವೈಲಿನ ನಿವಾಸಿ, ಗ್ರಾಮ ಪಂಚಾಯತ್ ಬಳಿಯ ಟೈಲರ್, ಹಳೆಯಂಗಡಿಯ ಛಾಯಾ ಗ್ರಾಹಕರೋರ್ವರಿಗೆ ಬೀದಿಯಲ್ಲಿ ಅಡ್ಡಾಡುತ್ತಿರುವ ಹುಚ್ಚು ನಾಯಿ ಕಚ್ಚಿದ್ದು ಮೂವರೂ ಸಹ ಕಟೀಲು ಹಾಗೂ ಮೂಲ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.