ಪಡ್ರೆ ವಾಣೀನಗರದಲ್ಲಿ ಮಂಜೇಶ್ವರ ಬ್ಲಾಕ್ ಕ್ಷೀರ ಕೃಷಿಕರ ಸಂಗಮ

Share with

ಪೆರ್ಲ: ಕೇರಳ ಸರಕಾರ ಕ್ಷೀರಾಭಿವೃದ್ಧಿ ಇಲಾಖೆ ಹಾಗೂ ಕಾಸರಗೋಡು ಜಿಲ್ಲೆ ಮಂಜೇಶ್ವರ ಬ್ಲಾಕ್ ನ ಕ್ಷೀರ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಮಂಜೇಶ್ವರ ಬ್ಲಾಕ್ ಕ್ಷೀರ ಕೃಷಿಕರ ಸಂಗಮ ಪಡ್ರೆ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ‌ ಆಡಿಟೋರಿಯಂನಲ್ಲಿ ಜರಗಿತು‌.

ಮಂಜೇಶ್ವರ ಬ್ಲಾಕ್ ಪಂ.ಅಧ್ಯಕ್ಷೆ ಶಮೀನ ಟೀಚರ್‌ ಸಮಾರಂಭ ಉದ್ಘಾಟಿಸಿದರು.

ಮಂಜೇಶ್ವರ ಬ್ಲಾಕ್ ಪಂ.ಅಧ್ಯಕ್ಷೆ ಶಮೀನ ಟೀಚರ್‌ ಸಮಾರಂಭ ಉದ್ಘಾಟಿಸಿದರು. ಬಳಿಕ ಮಾತನಾಡಿ “ಕ್ಷೀರೋದ್ಯಮದ ಅಭಿವೃದ್ಧಿಗಾಗಿ ಮಂಜೇಶ್ವರ ಬ್ಲಾಕ್ ಪಂಚಾಯಿತಿ ಕಟಿಬದ್ಧವಾಗಿದೆ‌. ಹೈನುಗಾರಿಕೆ ಮಾಡುವ ರೈತರ ಕ್ಷೇಮಾಭಿವೃದ್ಧಿ ಮತ್ತು ಆರ್ಥಿಕ ಸ್ಥಿತಿಯ ಅನುಕೂಲಕ್ಕಾಗಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಹಾಲು‌ ಮತ್ತು ಹಾಲಿನ ಇತರ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ಕ್ಷೀರ ಕೃಷಿಕರಿಗೆ ಪ್ರೋತ್ಸಾಹ ನೀಡಬೇಕು” ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಮೀನ ಟೀಚರ್‌.

ಸಭೆಯ ಅಧ್ಯಕ್ಷತೆಯನ್ನು ಮಂಜೇಶ್ವರ ಬ್ಲಾಕ್‌ ಪಂ.ಉಪಾಧ್ಯಕ್ಷ ಪಿ.ಕೆ.ಮುಹಮ್ಮದ್ ಹನೀಫ್ ವಹಿಸಿದ್ದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ ಜೆ.ಎಸ್, ಪುತ್ತಿಗೆ ಗ್ರಾ.ಪಂ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಕಾಸರಗೋಡು ಜಿ.ಪಂ.ಸದಸ್ಯ ನಾರಾಯಣ ನಾಯ್ಕ ಅಡ್ಕಸ್ಥಳ, ಎಂ.ಆರ್.ಸಿ.ಎಂ.ಪಿ.ಯು.ಬೋರ್ಡ್ ಸದಸ್ಯ ನಾರಾಯಣನ್ ಪಿ.ಪಿ., ಕೆ.ಡಿ.ಎಫ್.ಡಬ್ಲ್ಯು.ಎಫ್. ಸದಸ್ಯ, ಎಂ.ಆರ್.ಸಿ.ಎಂ.ಪಿ.ಯು.ಬೋರ್ಡ್ ಸದಸ್ಯ ಸುಧಾಕರನ್ ಕೆ., ಮಂಜೇಶ್ವರ ಬ್ಲಾಕ್‌ ಪಂ.ಸದಸ್ಯ ಕೆ.ಬಟ್ಟು ಶೆಟ್ಟಿ, ಕೆ.ಪಿ.ಅನಿಲ್ ಕುಮಾರ್, ವಾರ್ಡ್ ಸದಸ್ಯ ರಾಮಚಂದ್ರ ಎಂ., ಎಸ್.ಬಿ. ನರಸಿಂಹ ಪೂಜಾರಿ‌ ಶುಭ ಹಾರೈಸಿದರು.


Share with

Leave a Reply

Your email address will not be published. Required fields are marked *