ಬೆಳ್ತಂಗಡಿ: ಅಂತರ್ಜಾಲ ಕೆಲಸದ ಆಫರ್ ನೀಡಿ ಹಣ ಪಡೆದು ವಂಚಿಸಿದ ಬಗ್ಗೆ ಧರ್ಮಸ್ಥಳ ಕಾಯರ್ತ್ನಡ್ಕ ನಿವಾಸಿ ಉಷಾ ಪಿ.ವಿ.(41ವ) ಎಂಬವರು ನೀಡಿದ ದೂರಿನಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.9ರಂದು ಅಪರಿಚಿತ ವ್ಯಕ್ತಿಯೊಬ್ಬ ಉಷಾ ಅವರಿಗೆ ಕರೆಮಾಡಿ ಆನ್ ಲೈನ್ ಜಾಬ್ ಆಫರ್ ಕೊಟ್ಟಿದ್ದ. ಅದರಂತೆ ಉಷಾ ಅವರು ಕೆಲಸ ಪ್ರಾರಂಭಿಸಿದ್ದರು. ಆ ಬಳಿಕ ಅಪರಿಚಿತರು ಉಷಾ ಅವರಿಗೆ ವಿವಿಧ ಕಾರಣ ನೀಡಿ ಒಟ್ಟು ರೂ 4,25,934/ ಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 85/2023ರಂತೆ ಕಲಂ 419, 420 ಐಪಿಸಿ 66(ಸಿ) 66(ಡಿ) ಐ ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.