ಚೆಲ್ಯಡ್ಕ ಮುಳುಗು ಸೇತುವೆ ಸ್ಲ್ಯಾಬ್ ಕುಸಿತ: ಸಂಚಾರ ಸ್ಥಗಿತ

Share with

ಪುತ್ತೂರು: ಪರ್ಲಡ್ಕ ಕುಂಜೂರುಪಂಜ ಮೂಲಕವಾಗಿ ಕೇರಳ ಸಂಪರ್ಕದ ಪಾಣಾಜೆಗೆ ಸಾಗುವ ರಸ್ತೆಯಲ್ಲಿ ಸಿಗುವ ಚೆಲ್ಯಡ್ಕ ಮುಳುಗು ಸೇತುವೆಯ ಅಪ್ರೋಚ್‌ ಸ್ಲ್ಯಾಬ್ ಕುಸಿದು ಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಬೇಕಾಗಿರುವುದರಿಂದ ಅ.27ರಿಂದ ನ.6ರ ವರೆಗೆ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಲೋಕೋಪಯೋಗಿ ಇಲಾಖೆ ಸೂಚನೆ ನೀಡಿದೆ.

ಚೆಲ್ಯಡ್ಕ ಮುಳುಗು ಸೇತುವೆ ಸ್ಲ್ಯಾಬ್ ಕುಸಿತ.

ಆರ್ಯಾಪು ಗ್ರಾಮದ ಒಳತ್ತಡ್ಕ-ದೇವಸ್ಯದಿಂದ ಬೆಟ್ಟಂಪಾಡಿ-ಪಾಣಾಜೆ ಮೂಲಕ ಕೇರಳ ಪ್ರವೇಶಿಸುವ ವಾಹನಗಳು ಬದಲಿ ರಸ್ತೆಯಾಗಿ ದೇವಸ್ಯ-ಬೈರೋಡಿ-ಕಾಪಿಕಾಡು-ಕೈಕಾರ ಮಾರ್ಗವಾಗಿ ಸಂಚರಿಸುವ ಮೂಲಕ ದುರಸ್ತಿ ಕಾರ್ಯಕ್ಕೆ ಅನುವು ಮಾಡಿಕೊಡಬೇಕೆಂದು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *