ಉಪ್ಪಳ: ಬಾವಿಗೆ ಬಿದ್ದ ಆಡನ್ನು ಉಪ್ಪಳ ಅಗ್ನಿಶಾಮಕ ದಳ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಪೈ ವಳಿಕೆ ಬಳಿಯ ಹಮೀದ್ ಎಂಬವರ ಬಾವಿಗೆ ಗುರುವಾರ(ಅ.26) ಸಂಜೆ ಸಿದ್ದಿಕ್ ಎಂಬುವರ ಆಡು ಬಾವಿಗೆ ಬಿದ್ದಿದೆ.
ಮಾಹಿತಿ ತಿಳಿದು ಉಪ್ಪಳ ಅಗ್ನಿಶಾಮಕ ದಳ ತಲುಪಿ ಉಪಕರಣಗಳ ಮೂಲಕ ಆಡನ್ನು ಮೇಲೆತ್ತಿ ರಕ್ಷಿಸಿದ್ದಾರೆ. ಅಗ್ನಿಶಾಮಕ ದಳದ ಸ್ಟೇಷನ್ ಆಫೀಸರ್ ರಾಜೇಶ್ ಎಸ್ ಪಿ ಎಂಬವರ ನೇತೃತ್ವದಲ್ಲಿ ರಕ್ಷಿಸಲಾಗಿದೆ.