ಮಾದಕ ಮುಕ್ತ ತುಂಬೆ ಗ್ರಾಮವನ್ನಾಗಿಸಲು‌ ಸಂಕಲ್ಪ: ನ.1 ರಿಂದ ಡಿ.31 ರವರೆಗೆ ಅಭಿಯಾನ‌

Share with

ಬಂಟ್ವಾಳ: ಮುಹಿಯುದ್ದೀನ್ ಜುಮಾ ಮಸೀದಿ ತುಂಬೆ ಇದರ ನೇತೃತ್ವದಲ್ಲಿ ಎಂ.ಜೆ.ಎಂ ತುಂಬೆ ಮಾದಕ ಮುಕ್ತ ಅಭಿಯಾನ ಸಮಿತಿಯ ಆಶ್ರಯದಲ್ಲಿ ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಅಭಿಯಾನವು ನ.1ರಿಂದ ಡಿಸೆಂಬರ್ 31ರವರೆಗೆ ನಡೆಯಲಿದೆ ಎಂದು ತುಂಬೆ ಮಾದಕ ಮುಕ್ತ ಅಭಿಯಾನ ಸಮಿತಿ ಸಂಚಾಲಕ ಬಿ.ಅಬ್ದುಲ್ ಕಬೀರ್ ಅವರು ತಿಳಿಸಿದ್ದಾರೆ.

ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಅಭಿಯಾನ.

ಸೋಮವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ‌ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ‌ ನೀಡಿದ ಅವರು, “ಮಾದಕ ವ್ಯಸನ ನಿಲ್ಲಿಸೋಣ, ಗೌರವದ ಜೀವನ ಸಾಗಿಸೋಣ” ಹಾಗೂ “ನಮ್ಮ ಜಮಾತಿನ ನಡೆ ಮಾದಕ ಮುಕ್ತ ತುಂಬೆಯ ಕಡೆ” ಎಂಬ ಧ್ಯೇಯವಾಕ್ಯದೊಂದಿಗೆ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಇದರ ಪ್ರಯುಕ್ತ ನ.3ರಂದು ಮಧ್ಯಾಹ್ನ ಕುನಿಲ್ ಶಾಲೆಯಿಂದ ತುಂಬೆ ಜಂಕ್ಷನ್ ವರೆಗೆ ಕಾಲ್ನಡಿಗೆ ಜಾಥ ನಡೆಯಲಿದೆ. ಈ ಜಾಥದಲ್ಲಿ ಸ್ಥಳೀಯ ಶಿಕ್ಷಣ ಸಂಸ್ಥೆಗಳು, ಗ್ರಾ.ಪಂ., ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಲಿವೆ ಬಳಿಕ ಸರ್ವಧರ್ಮದ ಪ್ರಮುಖರು ಜಾಗೃತಿ‌ ಸಂದೇಶ ನೀಡಲಿದ್ದಾರೆ ಎಂದು ಹೇಳಿದರು. ಬಳಿಕ ಎರಡು ತಿಂಗಳ ಕಾಲ ತುಂಬೆ ಗ್ರಾಮದ ಪ್ರತಿ ಮನೆಗೂ ಜಾಗೃತಿ ಸಂದೇಶದ ಕರಪತ್ರ ವಿತರಣೆ, ಮಾಹಿತಿ ಶಿಬಿರಗಳು, ಕಾರ್ನರ್ ಮೀಟಿಂಗ್ಸ್, ಕೌನ್ಸಿಲಿಂಗ್, ಜನಜಾಗೃತಿ ಕಾರ್ಯಕ್ರಮಗಳು, ಸಾರ್ವಜನಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಟಿಯಲ್ಲಿ ಸಮಿತಿ‌ ಪದಾಧಿಕಾರಿಗಳಾದ ಮಹಮ್ಮದ್ ಇಂತಿಯಾಜ್, ಮಹಮ್ಮದ್ ಇರ್ಫಾನ್ ತುಂಬೆ, ಇಲ್ಯಾಸ್, ತುಂಬೆ ಗ್ರಾ.ಪಂ. ಸದಸ್ಯ ಝಹೂರ್ ಅಹಮ್ಮದ್ ಉಪಸ್ಥಿತರಿದ್ದರು. 


Share with

Leave a Reply

Your email address will not be published. Required fields are marked *