ಕಾಸರಗೋಡು: ವಿದ್ಯಾರ್ಥಿಯೋರ್ವ ಡೆತ್ ನೋಟ್ ಬರೆದಿಟ್ಟು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರ್ಲ ಸಮೀಪದ ಪದ್ಯಾಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಪದ್ಯಾಣದ ಸಿಲ್ವೆಸ್ಟರ್ ಕ್ರಾಸ್ತಾ ಎಂಬವರ ಪುತ್ರ ಐವನ್ ಕ್ರಾಸ್ತಾ(23) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಇವರು ತೊಕ್ಕೊಟ್ಟುವಿನ ಕಾಲೇಜೊಂದರಲ್ಲಿ ಬಿ.ಎಡ್ ವಿದ್ಯಾರ್ಥಿಯಾಗಿದ್ದರು.
ಮಂಗಳವಾರ ಮನೆಯಿಂದ ನಾಪತ್ತೆಯಾಗಿದ್ದ ಐವನ್ ಅವರನ್ನು ಹುಡುಕಾಡಿದಾಗ ರಾತ್ರಿ ವೇಳೆ ಮನೆ ಸಮೀಪದ ಬಾವಿಯಲ್ಲಿ ಅವರ ಮೃತದೇಹವು ಪತ್ತೆಯಾಗಿದೆ.
ಈ ನಡುವೆ ಅವರ ಮಲಗುವ ಕೋಣೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿಟ್ಟಿದ್ದರೆನ್ನಲಾಗಿದೆ.
ಬದಿಯಡ್ಕ ಠಾಣಾ ಪೊಲೀಸರು ಮಹಜರು ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.