ಪೈವಳಿಕೆ: ಪೈವಳಿಕೆ ಪಂಚಾಯತ್ನ ಬೆರಿಪದವು 7ನೇ ವಾರ್ಡ್ನಲ್ಲಿ ಕೆಟ್ಟುಹೋದ ಬೀದಿ ದೀಪಗಳನ್ನು ವಾರ್ಡ್ ಸದಸ್ಯೆ ಜಯಲಕ್ಷ್ಮಿ ಭಟ್ ರವರ ಉಪಸ್ಥಿತಿಯಲ್ಲಿ ಗುತ್ತಿಗೆ ದಾರ ನ.7ರಂದು ದುರಸ್ಥಿಗೊಳಿಸಿದರು.
ಬಳ್ಳೂರು, ವಾಟೆಪಡ್ಪು, ಬೆರಿಪದವು, ಕೊಜಪ್ಪೆ, ಗೋಳಿಕಟ್ಟೆ, ಪೆರ್ವೋಡಿ ಮೊದಲಾದ ಪ್ರದೇಶಗಳಲ್ಲಿ ಹಾನಿಗೊಂಡ ಹಲವು ದೀಪಗಳನ್ನು ದುರಸ್ಥಿಗೊಳಿಸಿ ಉರಿಸಲಾಯಿತು. ಬೀದಿ ದೀಪ ಹಾನಿಗೊಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಕಾಲದಲ್ಲಿ ಸಂಚಾರಕ್ಕೆ ಸಮಸ್ಯೆಗೀಡಾಗಿದ್ದರು. ವಾರ್ಡ್ ಸದಸ್ಯೆಯರ ಮುತುವರ್ಜಿಯಿಂದ ದೀಪವನ್ನು ದುರಸ್ಥಿಗೊಳಿಸಿದ ಹಿನ್ನೆಲೆಯಲ್ಲಿ ಊರವರಲ್ಲಿ ನೆಮ್ಮದಿಯನ್ನುಂಟು ಮಾಡಿದೆ.